ಬಳ್ಳಾರಿ. ಜ. 27.. ಬಳ್ಳಾರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಇವರು ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಕ್ತ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕವನ್ನು ಪಡೆದಿದ್ದಾರೆ.
1994 ರಲ್ಲಿ ಪಿಎಸ್ಐ ಆಗಿ ಬೆಂಗಳೂರಿನ ನಗರದಲ್ಲಿ ಸೇವೆ ಆರಂಭಿಸಿದ ನವೀನ್ ಕುಮಾರ್ ಮೈಸೂರು ತುಮಕೂರು ತಿರುಮಕೂಡಲು ನರಸೀಪುರ ಸೇರಿದಂತೆ ಇತರ ಕಡೆಯಲ್ಲಿ ಅವರು ತಮ್ಮ ಸೇವೆ ಸಲ್ಲಿಸಿದ್ದು, ನಂತರ 2002ರಲ್ಲಿ ಸಿಪಿಐ ಆಗಿ ಬರ್ತಿ ಪಡೆದರು ತದನಂತರ ಲೋಕಾಯುಕ್ತ ಮತ್ತು ಬೆಂಗಳೂರು ನಗರದ ಸದಾಶಿವನಗರ, ಕಾಮಾಕ್ಷಿಪಾಳ್ಯ ಕುಮಾರಸ್ವಾಮಿ ಲೇಔಟ್ ಹೈ ಗ್ರೌಂಡ್ ಪೋಲಿಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು ನಂತರ 2015ರಲ್ಲಿ ಡಿವೈಎಸ್ಪಿ ಆಗಿ ಕೊಳ್ಳೇಗಾಲ ಮಳವಳ್ಳಿ ನಾಗಮಂಗಲ ಪ್ರಾಣಿಗಳಲ್ಲಿ ಸೇವೆ ಸಲ್ಲಿಸಿ ಎ ಎಸ್ ಪಿ ಆಗಿ ಬಡ್ತಿ ಹೊಂದಿ ಡಿಸೆಂಬರ್ 28 203 ರಿಂದ ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರಸ್ತುತ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಲಾಗಿದೆ. ಇದಕ್ಕೂ ಮುನ್ನ 2022ರಲ್ಲಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿತ್ತು.


