ಅಥಣಿ: ಶಾಸಕ ಲಕ್ಷ್ಮಣ ಸವದಿ ಅವರ ಮನೆಯಲ್ಲಿ ನಡೆದಿರುವ ಘಟನೆ ತನಿಖೆ ನಡೆಯುತ್ತಿದ್ದ ಸತ್ಯಾಸತ್ಯತೆ ಹೋರಬರಲಿ ಯಾರೇ ತಪ್ಪು ಮಾಡಿದ್ದರೆ ಅವರ ವಿರುದ್ದ ಹೊರಾಟ ಮಾಡುತ್ತೇವೆ ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ರಾವಸಾಹೇಬ ಬೇವನೂರ ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿವನೂರ ಮಾತನಾಡಿ, ಸಮಾಜದ ಹೆಸರನ್ನು ಯಾರು ದುರ್ಬಳಿಕೆ ಮಾಡಿಕೊಳ್ಳಬಾರದು, ಶಾಸಕ ಲಕ್ಷ್ಮಣ ಸವದಿ ಅವರ ಮನೆಯಲ್ಲಿ ನಡೆದಿರುವ ಘಟನೆ ತನಿಖೆ ನಡೆಯಲಿ, ನಮ್ಮ ಸಮಾಜದ ಸತ್ಯಪ್ಪ ಬಾಗೇಣ್ಣವರ ಹೇಳಿಕೆ ಅವರ ವಯಕ್ತಿಕ ಹೇಳಿಕೆಯಾಗಿದೆ. ಅದಕ್ಕೆ ನಮ್ಮ ಸಮಾಜಕ್ಕೆ ಯಾವುದೆ ಸಂಬಂಧ ಇಲ್ಲಾ. ಯಾವುದೆ ಹೇಳಿಕೆ ನೀಡುದಾದರೆ ಸಮಾಜದ ಒಪ್ಪಿಗೆ ಪಡೆಯಬೇಕು. ಸಮಾಜದ ಪರ ವಿರೋಧ ಯಾವುದೆ ಹೇಳಿಕೆಗಳನ್ನು ಹಾಲುಮತ ಸಮಾಜದ ಮುಖಂಡರು ಹೇಳುದನ್ನು ನಿಲ್ಲಿಸಬೇಕು ಎಂದು ಹೇಳಿದರು
ಈ ವೇಳೆ ಶ್ರೀಶೈಲ ಶೇಲ್ಲಪಗೋಳ, ಸುರೇಶ ಮಾಯಣ್ಣವರ, ಸುರೇಶ ಪೂಜಾರಿ, ಕಲ್ಲಪ್ಪ ಮೇತ್ರಿ ಚಿದಾನಂದ ಮುಕಣಿ, ಶಂಕರ ವಾಘಮೋಡೆ, ಬಾಬುರಾವ ಮೇಂಡಿಗೇರಿ, ಬಾಬುರಾವ ವಾಘಮೋಡೆ, ಸಿದ್ದು ಲೋಕುರು, ಅಪ್ಪು ಪೂಜಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು
ಯಾರೇ ತಪ್ಪು ಮಾಡಿದ್ದರೆ ಅವರ ವಿರುದ್ದ ಹೊರಾಟ ಮಾಡುತ್ತೇವೆ : ಅಧ್ಯಕ್ಷ ರಾವಸಾಹೇಬ ಬೇವನೂರ


