ಹನೂರು : ದಿನ ನಿತ್ಯ ಪತ್ರಕರ್ತರು ಹಾಗೂ ಶಿಕ್ಷಕರ ವೃತ್ತಿ ಪ್ರಾರಂಭವಾಗುವುದೆ ಪೆನ್ನು ಪುಸ್ತಕಗಳಿಂದ ಆದ್ದರಿಂದ ಶಾಲಾ ಮಕ್ಕಳಿಗೆ ಕಲಿಕ ಸಾಮಗ್ರಿಗಳನ್ನು ನೀಡುವ ಕಾರ್ಯವು ನಮ್ಮ ಸಂಘದ ನಿರಂತರವಾಗಿರಲಿ ಹಾಗೂ ಇದೇ ತಿಂಗಳಲ್ಲಿ ಹನೂರಿನಲ್ಲಿ ನಡೆದ ಕರ್ನಾಟಕ ಪತ್ರಕರ್ತರ ಸಂಘದಿಂದ ಶಾಲಾ ಮಕ್ಕಳಿಗೆ ಉಚಿತ ನೊಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿತ್ತು ಅದರ ಮುಂದುವರೆದ ಭಾಗವಾಗಿ ಇಂದು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಗಳನ್ನು ನೀಡಲಾಗಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಬಂಗಾರಪ್ಪ .ಸಿ ರವರು ತಿಳಿಸಿದರು.
ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಇಂದು ಹಮ್ಮಿ ಕೊಂಡಿದ್ದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಲಿಕ ಹಂತದಲ್ಲಿ ಉತ್ತಮ ಭೋದನೆ ಮತ್ತು ಲೇಖನ ಸಾಮಾಗ್ರಿಗಳನ್ನು ಧಾನಿಗಳ ಸಹಯೋಗದೊಂದಿಗೆ ವಿತರಣೆ ಮಾಡಲು ನಮ್ಮ ಸಂಘದ ಎಲ್ಲಾ ಸದಸ್ಯರ ಅಣತಿಯಂತೆ ನಾವು ಮುಂದುವರಿಯುತ್ತಿದ್ದೇವೆ ಹಾಗೂ ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಬೆಳೆಯಬೇಕು ಇದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯಲ್ಲಿರುವವರು ಕೊಡುಗೆ ನೀಡಬೇಕು ಸರ್ಕಾರಿ ಶಾಲೆಗಳ ಉಳಿವು ಹಾಗೂ ಅಭಿವೃದ್ಧಿಗೆ ಸದಾ ಸಿದ್ಧ ಎಂದು ತಿಳಿಸಿದರು.
ಮುಖ್ಯ ಶಿಕ್ಷಕರಾದ ವೆಂಕಟೇಶ್ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳನ್ನು ಗುರುತಿಸಿ ಕರ್ನಾಟಕ ಪತ್ರಕರ್ತರ ಸಂಘದ ಪಧಾದಿಕಾರಿಗಳ ಸಹಾಯದಿಂದ ಉಚಿತ ನೋಟ್ ಬುಕ್ ,ಪೆನ್ ,ಪೆನ್ಸಿಲ್ ಗಳನ್ನು ವಿತರಣೆ ಮಾಡುತ್ತಿರುವ ಪತ್ರಕರ್ತರ ಸಂಘದ ಕಾರ್ಯಕ್ಕೆ ನಮ್ಮೇಲ್ಲರ ಸಹಕಾರವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡರಾದ ಅಮ್ಜಾದ್ ಖಾನ್ ಮಾತನಾಡಿ ನಮ್ಮ ರೈತ ಸಂಘವು ಬಹಳ ವಿಬಿನ್ನವಾಗಿ ಸತ್ಯದ ಪರವಾಗಿ ಹೋರಾಟ ಮಾಡಿ ಯಶಸ್ವಿಯಾಗಿ ಬರುತ್ತಿದ್ದು ಪತ್ರಕರ್ತರ ಸಂಘದ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರವಿದೆ ನಿಮ್ಮ ಸಾಮಾಜಿಕ ಕಳಕಳಿಯ ಕೆಲಸವು ನಿರಂತರವಾಗಿರಲಿ ಎಂದು ತಿಳಿಸಿದರು .
ಈ ಸಮಯದಲ್ಲಿ ಸಮಯದಲ್ಲಿ ಎಂಬತ್ತು ಮಕ್ಕಳಿಗೂ ಹೆಚ್ಚು ವಿದ್ಯಾರ್ಥಿಗಳಿಗೂ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು.
ಇದೇ ಕಾರ್ಯಕ್ರಮದಲ್ಲಿ ,ಶಿಕ್ಷಕರಾದ ಶ್ರೀ ಮತಿ ಮಾಲತಿ . ರುಹುಲ್ಲ . ಪರಿಮಳ ,ಸುಮ .ಆಶ , ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಿವರಾಜು. ಸೇರಿದಂತೆ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಸವರಾಜು , ಸಂಘಟನಾ ಕಾರ್ಯದರ್ಶಿ ಶಾರುಕ್ ಖಾನ್ , ಖಜಾಂಚಿ ಚೇತನ್ ಕುಮಾರ್ ,ಹಾಗೂ ಕಾರ್ತಿಕ್ ,ಅಜೀತ್ ಇನ್ನಿತರರು ಹಾಜರಿದ್ದರು .
ವರದಿ : ಬಂಗಾರಪ್ಪ .ಸಿ