ಕೊಪ್ಪಳ: ಶ್ರೀ ಗವಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಮಹಾದಾಸೋಹಕ್ಕೆ ಅನೇಕ ಭಕ್ತರು ವಿವಿಧ ರೀತಿಯ ಖಾದ್ಯಗಳ ಸೇವೆ ಸಮರ್ಪಿಸುವುದು ಜಾತ್ರ ಮಹೋತ್ಸವದ ವಿಶೇಷತೆ. ಇಂದು ಸಿಂಧನೂರಿನ ಗೆಳೆಯರ ಬಳಗದ ವತಿಯಿಂದ ದಿನಾಂಕ ೫ ಮತ್ತು ೬ ರಂದು ಭಕ್ತರಿಗೆ ಮೈಸೂರು ಪಾಕ್ ಸವಿಯಲು ತಯಾರಿಕೆಯಲ್ಲಿ ತೊಡಗಿದ್ದಾರೆ. ಇಂದು ದಿನಾಂಕ ೦೩.೦೧.೨೦೨೬ ರಂದು ಬೆಳಗ್ಗೆ ೬ ಗಂಟೆಯಿಂದ ತಯ್ಯಾರಿಕೆಯಲ್ಲಿ ತೊಡಗಿದ್ದು, ಇದು ರಾತ್ರಿ ೧೧ರವರೆಗೆ ಮತ್ತು ನಾಳೆಯು ಸಹ ಮುಂದುವರಿಯಲಿದೆ.

ಮೈಸೂರು ಪಾಕ್ ತಯ್ಯಾರಿಸುವುದಕ್ಕೆ ೬೦ಕ್ವಿಂಟಲ್ ಸಕ್ಕರೆ, ೫೦೦೦ ಲೀಟರ್ ಅಡುಗೆ ಎಣ್ಣೆ, ೩೦ಕ್ವಿಂಟಲ್ ಕಡಲೆ ಹಿಟ್ಟು, ೫ಕ್ವಿಂಟಲ್ ಮೈದ ಹಿಟ್ಟು, ೩೦ ಕ್ವಿಂಟಲ್ ತುಪ್ಪ, ೫೦ಕೆಜಿ ಯಾಲಕ್ಕಿ ಸಾಮಗ್ರಿಗಳೊಂದಿಗೆ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ಅಂದಾಜು ಹತ್ತರಿಂದ ಹನ್ನೆರಡು ಲಕ್ಷ ಜನ ಇದನ್ನು ಸೇವಿಸಬಹುದಾಗಿದೆ. ತಯಾರಿಸುವುದಕ್ಕೆ ಅಥಣಿ, ಧನಾವರ, ಮಸ್ಕಿ, ಗಬ್ಬುರ್, ಬಳಗಾನೂರ, ತಾವರಗೇರಾ ಮುಂತಾದ ೧೦೦ಕ್ಕೂ ಹೆಚ್ಚು ಬಾಣಸಿಗರು ಆಗಮಿಸಿ ತಯ್ಯಾರಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ಸಾಯಕರಾಗಿ ಮತ್ತು ಇತರೆ ವ್ಯವಸ್ಥೆಗಾಗಿ ೨೦೦ಕ್ಕೂ ಹೆಚ್ಚು ಜನ ತಯ್ಯಾರಿಕೆ ಸೇವೆಯಲ್ಲಿ ತೊಡಗಿ ಕೊಂಡಿರುತ್ತಾರೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



