ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರತಿ ವರ್ಷದಂತೆ ಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂ ಜಾತ್ರಾ ಮಹೋತ್ಸವದ ಮೂರನೇ ದಿನವಾದ ೭.೦೧.೨೬ರ ಬುಧವಾರದಂದು ವಿಶೇಷ ಖಾದ್ಯವಾದ ಹಪ್ಪಳ ವಿತರಿಸಲಾಯಿತು. ಕಳೆದ ೮ ವರ್ಷಗಳಿಂದ ಜಾತ್ರಾ ವಿವಿಧ ಮಿರ್ಚಿ,ಜಿಲೇಬಿ ತಯಾರಿಕೆಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ಸಿರಿಗೇರೆಯ ಗವಿಶ್ರೀ ಸ್ನೇಹ ಗೆಳೆಯರ ಬಳಗ ಹಾಗೂ ಉದಯ ಗ್ರೂಪ್ ಗೆಳೆಯರ ಬಳಗ ಹಾಗೂ ಸಿದ್ರಾಂಪುರ, ಹಾವಿನಾಳ,ಸಿರಿಗೇರಿ,ದಾಸಾಪುರ, ಕೊಂಚಗೇರಿ,ಮುತ್ತಟ್ ನೂರು, ಗುಂಡಿಗನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಈ ವರ್ಷ ಹಪ್ಪಳ ವಿತರಣಾ ಸೇವೆ ಕೈಗೊಂಡಿದೆ.
ಹಪ್ಪಳ ತಯಾರಿಕೆಗೆ ೧೪ ಡಬ್ಬಿ ಎಣ್ಣೆ, ಹಪ್ಪಳ ತಯಾರಿಕೆಗೆ ೫೦ ಜನ ಬಾಣಸಿಗರು ಹಾಗೂ ಅವರಿಗೆ ೨೦ ಜನ ಸಹಾಯ ಮಾಡುವುದರ ಮೂಲಕ ಹಪ್ಪಳ ತಯಾರಿಕೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟು ೫ ಲಕ್ಷ ಹಪ್ಪಳಗಳನ್ನು ತಯಾರಿಸುವುದರ ಮೂಲಕ ಜಾತ್ರಗೆ ಬಂದ ಭಕ್ತಾಧಿಗಳಿಗೆ ವಿತರಿಸುವ ಸೇವೆಗೈದರು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.



