ರೈತರ ಭೂಮಿಗಳಿಗೆ ರಸ್ತೆ  ಸಂಪರ್ಕಕ್ಕೆ ಆದ್ಯತೆ:ಬಾಬಾಸಾಹೇಬ ಪಾಟೀಲ 

Ravi Talawar
ರೈತರ ಭೂಮಿಗಳಿಗೆ ರಸ್ತೆ  ಸಂಪರ್ಕಕ್ಕೆ ಆದ್ಯತೆ:ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ನೇಸರಗಿ. ರೈತರ ಕೆಲಸ ಕಾರ್ಯಗಳಿಗೆ  ಹೊಲಗದ್ದೆಗಳಿಗೆ ಸಂಚರಿಸಲು, ಟ್ರ್ಯಾಕ್ಟರ್ ಚಳಿಸಲು, ಬೆಳೆದ  ಕಾಳು, ಮೇವುಗಳನ್ನು  ಮನೆಗೆ, ಮಾರುಕಟ್ಟೆಗೆ ತರಲು, ಎಲ್ಲರ  ಭೂಮಿಗೆ ಹೋಗುವ, ಮರಳುವ  ರಸ್ತೆ  ನಿರ್ಮಾಣ  ಕೆಲಸ ಮಾಡುತ್ತಿದ್ದು  ರೈತರ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
     ಅವರು ಸಮೀಪದ ಮೇಕಲಮರಡಿ, ಕಲಕುಪ್ಪಿ ಗ್ರಾಮದ  ಶಾಸಕರ ಅನುದಾನದಲ್ಲಿ 10 ಲಕ್ಷ  ರೂಪಾಯಿಗಳ ವೆಚ್ಚದಲ್ಲಿ  ರೈತರ ಜಮೀನುಗಳಿಗೆ ಸಂಪರ್ಕ  ರಸ್ತೆಯ ಸುಮಾರು 700 ಮೀಟರ್ ಉದ್ದ ಮೆಟ್ಲಿಂಗ್ ಕಾಮಗಾರಿಗೆ ಭೂಮಿ  ಪೂಜೆ ಸಲ್ಲಿಸಿ ಮಾತನಾಡಿದರು.
    ಈ ಸಂದರ್ಭದಲ್ಲಿ    ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಕೇರಿ,ಕಾಗ್ರೇಸ್ ಯುವ ಮುಖಂಡ  ಸಚಿನ ಪಾಟೀಲ, ಹಿರಿಯರಾದ ಅಡಿವಪ್ಪ ಮಾಳಣ್ಣವರ , ಗ್ರಾ ಪಂ. ಅಧ್ಯಕ್ಷರಾದ ಭಾರತಿ ತಿಗಡಿ, ಗ್ರಾ ಪಂ. ಉಪಾಧ್ಯಕ್ಷರಾದ ಕಾಸಿಂ ಜಮಾದಾರ, ಗ್ರಾ ಪಂ. ಸದಸ್ಯರಾದ ರಾಜು ಹಣ್ಣಿಕೇರಿ, ಯಲ್ಲವ್ವ ಗುಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಗ್ರಾಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article