ನೇಸರಗಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಬೆಳಗಾವಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಲೋವ್ ವಾಕಿಂಗ್ ಕ್ರೀಡೆಯಲ್ಲಿ ಕಮಲಾಕ್ಷಿ ಇಂಚಲ, ಹಮ್ಮರ ಥ್ರೋ ಸ್ಪರ್ಧೆಯಲ್ಲಿ ಸುಜಾತಾ ಮದೇನ್ನವರ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಕಾಲೇಜು ಪ್ರಾಂಶುಪಾಲರಾದ ಎನ್ ಎಮ್. ಕುದರಿಮೋತಿ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡರ,ಆಡಳಿತ ಮಂಡಳಿ ಸದಸ್ಯರು, ಭೋಧಕ, ಭೋಧಕ್ಕೇತ್ತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.