15 ಸಾವಿರ ಕಾರ್ಯಕರ್ತರಿಂದ ಏಕಕಾಲಕ್ಕೆ ಪ್ರಯಾಗ್‌ರಾಜ್‌ ಸ್ವಚ್ಛತೆ: ಗಿನ್ನೆಸ್‌ ವಿಶ್ವದಾಖಲೆ!

Ravi Talawar
15 ಸಾವಿರ ಕಾರ್ಯಕರ್ತರಿಂದ ಏಕಕಾಲಕ್ಕೆ ಪ್ರಯಾಗ್‌ರಾಜ್‌ ಸ್ವಚ್ಛತೆ: ಗಿನ್ನೆಸ್‌ ವಿಶ್ವದಾಖಲೆ!
WhatsApp Group Join Now
Telegram Group Join Now

ಮಹಾಕುಂಭನಗರ, ಉತ್ತರಪ್ರದೇಶ: ಸುಮಾರು 15,000 ನೈರ್ಮಲ್ಯ ಕಾರ್ಯಕರ್ತರು ಸೋಮವಾರ ಇಲ್ಲಿ ನಾಲ್ಕು ವಲಯಗಳಲ್ಲಿ ಸಿಂಕ್ರೊನೈಸ್ ಮಾಡಿದ ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಪ್ರಯಾಗರಾಜ್ ಮೇಯರ್ ಗಣೇಶ್ ಕೇಸರವಾಣಿ, ಮಹಾಕುಂಭದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೇಲ್ವಿಚಾರಣಾ ತಂಡ, 15,000 ಕಾರ್ಮಿಕರಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯ ಮೇಲ್ವಿಚಾರಕ ಮತ್ತು ಜಡ್ಜ್​ ರಿಷಿ ನಾಥ್ ಅವರು ತಮ್ಮ ತಂಡದೊಂದಿಗೆ ಲಂಡನ್‌ನಿಂದ ಪ್ರಯಾಗರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಿಸ್ಟ್‌ಬ್ಯಾಂಡ್‌ನಲ್ಲಿರುವ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೈರ್ಮಲ್ಯ ಕಾರ್ಮಿಕರ ತಲೆ ಎಣಿಕೆ ಮಾಡಲಾಗಿದೆ. ದಾಖಲೆಯ ಅಂತಿಮ ಮೌಲ್ಯಾಂಕನ ವರದಿಯನ್ನು ಮೂರು ದಿನಗಳ ನಂತರ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ.

WhatsApp Group Join Now
Telegram Group Join Now
Share This Article