ರನ್ನ ಬೆಳಗಲಿ: ನ.3: ಪಟ್ಟಣದ ಎಂ.ಪಿ.ಎಸ್ ರನ್ನ ಬೆಳಗಲಿ ಶಾಲೆಯಲ್ಲಿ ೬೯ನೇ ಕರ್ನಾಟಕ
ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನೂತನವಾಗಿ ರನ್ನ ಬೆಳಗಲಿ ಪಟ್ಟಣ ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣಗೌಡ ಭರಮನಿ ಅವರಿಗೆ ಶಾಲೆ ಎಸ್.ಡಿ.ಎಂ.ಸಿ ಅವರು ಸನ್ಮಾನಿಸಿ ಗೌರವಿಸಿದರು.
ಸನ್ಮಾನವನ್ನು ಸ್ವೀಕರಿಸಿದ ಶ್ರೀಯುತರು ಶತಮಾನದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿವೆ ೧೪೫ ವರ್ಷ ಪೂರೈಸಿದ ನಮ್ಮೂರಿನ ಶಾಲೆಯು ಅನೇಕ ಬೌದ್ಧಿಕ ಸಂಪನ್ಮೂಲಗಳ ಅಭಿವೃದ್ಧಿ ಜೊತೆಗೆ ಅತ್ಯುತ್ತಮವಾದ ರೀತಿಯಲ್ಲಿ ಕಂಗೊಳಿಸಬೇಕಾಗಿದೆ. ಸಾವಿರಾರು ಸಂಖ್ಯೆ ದಾಖಲಾತಿಯನ್ನು ಹೊಂದಿರುವ ಶಾಲೆಯು ಇತ್ತೀಚಿನ ದಿನಗಳಲ್ಲಿ ಸಂಪನ್ಮೂಲ ಮತ್ತು ಶಿಕ್ಷಕರ ಕೊರತೆಯಿಂದ ೨೦೦ ಆಸುಪಾಸಿನಲ್ಲಿ ದಾಖಲಾತಿ ಇರುವುದು ದುರ್ದೈವದ ಸಂಗತಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಇಲಾಖೆಯಲ್ಲಿ ನೌಕರರಾಗಿದ್ದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲ ಮರಳಿ ನನ್ನ ಶಾಲೆ ನನ್ನ ಹೆಮ್ಮೆ ಎಂಬ ಶೀರ್ಷಿಕೆ ಅಡಿಯಲ್ಲಿ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಶಾಲೆಯ ಹಳೆ ವಿದ್ಯಾರ್ಥಿ, ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ, ಮತ್ತು ರಾಜಾಸಾಬ್ ತೇರದಾಳ, ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅರ್ಜುನ ಸರವಿ, ಉಪಾಧ್ಯಕ್ಷರಾದ ರೇಣುಕಾ ಕುಂಬಾಳಿ, ಸದಸ್ಯರಾದ ನಾಗಪ್ಪ ಲೋಹಾರ, ಮುಖ್ಯೋಪಾಧ್ಯಾಯರಾದ ಆರ್.ಎ.ತಳವಾರ, ಶಿಕ್ಷಕರಾದ ಶ್ರೀಮತಿ ವ್ಹಿ.ಎಸ್.ಬಿರಾದಾರ, ಗೌರವ ಶಿಕ್ಷಕರಾದ ಚೇತನ ಕೊಣ್ಣೂರ, ಕಾಶಪ್ಪ ಸರವಿ, ವಿಜಯಲಕ್ಷ್ಮಿ ಮಠಪತಿ, ಬಂದವ್ವ ಹೊಳೆಪ್ಪಗೋಳ ಮತ್ತು ಯುವ ಮುಖಂಡರಾದ ಆನಂದ ಪಾಟೀಲ ಈಶ್ವರ ಪೂಜಾರಿ
ಉಪಸ್ಥಿತರಿದ್ದರು.