ಬೈಲಹೊಂಗಲ: ಸಮೀಪದ ಸೊಗಲ ರಸ್ತೆ ಪಕ್ಕದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಇಂದಿನಿಂದ (ಜ.9) 14ರ ವರೆಗೆ ಸತತ ಆರು ದಿನಗಳ ಕಾಲ ಪ್ರವಚನ ಮತ್ತು ವಿವಿಧ ಧಾರ್ಮಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.
ಜ.9 ರಂದು ಸಂಜೆ 6ಕ್ಕೆ ಘಟಪ್ರಭಾ ಶ್ರೀ ಶಿವಕುಮಾಮಾರ ಶ್ರೀಗಳಿಂದ ”ಶಿವಪಥವನರಿದೊಡೆ ಗುರುಪಥವೆ ಮೊದಲು’ ವಿಷಯ ಕುರಿತು ಪ್ರವಚನ ನಡೆಯಲಿದೆ. ಜ.10 ರಂದು ಸಂಜೆ 6ಕ್ಕೆ ಲಿಂಗವ ಪೂಜಿಸಿದೊಡೆ ಪರದಲ್ಲಿ ಸುಖ” ವಿಷಯ ಕುರಿತು ಪ್ರವಚನ ನಡೆಯಲಿದೆ.
ಜ. 11 ರಂದು ಬೆಳಗ್ಗೆ 10.30ಕ್ಕೆ ಪಶು ಆಸ್ಪತ್ರೆ ವತಿಯಿಂದ ಜಾನುವಾರಗಳ ಆರೋಗ್ಯ ಶಿಬಿರ ಮಧ್ಯಾಹ್ನ 3ಕ್ಕೆ ಕಾರಿಮನಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಂಚವಟಿ ವರೆಗೆ ಸುತ್ತ ಮುತ್ತಲಿನ ಗ್ರಾಮಗಳ ಮಹಿಳೆಯರಿಂದ ಸಹಸ್ರ ಪೂರ್ಣ ಕುಂಭೋತ್ಸವ ಮೆರವಣಿಗೆ, ಸಂಜೆ 6ಕ್ಕೆ ಗೋ-ಪೂಜೆ, ಮಹಿಳಾ ಗೋಷ್ಠಿ, ಮಹಿಳೆಯರಿಗೆ ಉಡಿ ತುಂಬುವುದು, ಹೋವಿನ ಮಹತ್ವ ವಿಚಾರ ಸಂಕಿರಣ ಜ. 12 ರಂದು ಸಂಜೆ 6ಕ್ಕೆ ರೈತ ಹಾಗೂ ಕೃಷಿ ಬಗ್ಗೆ ವಿಚಾರ ಸಂಕಿರಣ ಗೋಷ್ಠಿ ನಡೆಯಲಿದೆ.
ಜ. 13 ರಂದು ಬೆಳಗ್ಗೆ 7ಕ್ಕೆ ಶಿವಗಣಪತಿ ಮಂದಿರದ ಮೂರ್ತಿಗಳಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಗ್ಗೆ 10.30ಕ್ಕೆ ಆಧುನಿಕ ಧರ್ಮದಲ್ಲಿ ಯುವಕರ ಪಾತ್ರ ಕುರಿತು ಯುವ ಸಮಾವೇಶ. ಸಂಜೆ 6ಕ್ಕೆ ಮಠ ಮತ್ತು ಸಮಾಜ, ಗುರು ಹಾಗೂ ಕರಸಂಜಾತರ ಸಮ್ಮಿಲನ ರಾತ್ರಿ 9ಕ್ಕೆ ಸಂಗೀತ ಸಂಭ್ರಮ ನಡೆಯಲಿದೆ.
ಜ.14 ರಂದು ಬೆಳಗ್ಗೆ 7ಕ್ಕೆ ಪಂಚವಟಿ ಸಂಕ್ರಾಂತಿ ಸಂಭ್ರಮ ನಂತರ ಅಭ್ಯಂಗ ಸ್ನಾನ, ವಿಶೇಷ ಪೂಜೆ, ಧ್ಯಾನ ಉಪದೇಶ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ.
ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಬೆಳಗಾವಿ ಗುರುಸಿದ್ದ ಶ್ರೀಗಳು, ಅಲಮಪ್ರಭು ಶ್ರೀಗಳು, ಚಿದಾನಂ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಜಡಿಸಿದ್ದೇಶ್ವರ ಶ್ರೀಗಳು, ಪಂಚಮ ಶಿವಲಿಂಗ ಶ್ರೀ ಗಳು, ವಪ್ಪತ್ತೇಶ್ವರ ಶ್ರೀಗಳು, ಚಿದಾನಂದ ಅವದೂತ ಶ್ರೀಗಳು, ಮಲ್ಲಿಕಾರ್ಜುನ ಶ್ರೀ ಗಳು, ಅಮರಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು.
ಮುನವಳ್ಳಿ ಶ್ರೀ ಮುರುಫೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೈಲಹೊಂಗಲ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸುವರು. ಪಂಚವಟಿ ಮುಖ್ಯ ವ್ಯವಸ್ಥಾಪಕ ಸಂತೋಷ ಹಿರೇಮಠ,ಧರ್ಮದರ್ಶಿಗಳಾದ ಅಶೋಕ ಶೆಟ್ಟರ್, ಎ.ಬಿ.ದೇಸಾಯಿ ನೇತೃತ್ವ ವಹಿಸುವರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳಕರ, ಶಾಸಕ ಮಹಾಂತೇಶ ಕೌಜಲಗಿ, ಪಶುವೈದ್ಯ ಡಾ. ಎಂ.ಬಿ. ಸಜ್ಜನ ಸೇರಿದಂತೆ ನಾನಾ ಗಣ್ಯರು ಪಾಲ್ಗೊಳ್ಳಲಿರುವ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.