ಮೂಡಲಗಿ : ಪ್ರತಿ ವ?ದಂತೆ ಈ ವ?ವು ಸಹ ನಮ್ಮ ಸಂಸ್ಥೆಯ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ. ಯಲ್ಲಿ ೯೦% ಹಾಗೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಇದೆ ಆಗ? ೧೭ ರಂದು ಬೆಳಿಗ್ಗೆ ೯.೦೦ ಗಂಟೆಗೆ ರವಿವಾರ ಗೋಕಾಕ ನಗರದ ಬ್ಯಾಳಿಕಾಟಾ ಹತ್ತಿರ ಇರುವ ಶೂನ್ಯ ಸಂಪಾನಮಠದ ಸಿದ್ದಲಿಂಗೇಶ್ವರ ಬಿ.ಸಿ.ಎ. ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಪೂರ್ವ ರಾಷ್ಟ್ರೀಯ ಸಂಯೋಜಕ ವಿ? ಲಾತೂರ ಹೇಳಿದರು,
ಶನಿವಾರ ಮೂಡಲಗಿಯಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದ ಸಾನಿಧ್ಯವನ್ನು ಶೂನ್ಯ ಸಂಪಾಧನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ವಹಿಸುವರು, ಸಮಾರಂಭಕ್ಕೆ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ,ಸಂಸದೆ ಪ್ರಿಯಾಂಕ ಜಾರಕಿಹೊಳಿ, ತಹಶೀಲ್ದಾರ ಡಾ ಮೋಹನ ಬಸ್ಮೇ, ಬಿಈಓ ಬಳಿಗಾರ, ತರಬೇತುದಾರ ಮೋಹನ ಆಗಮಿಸುವರು ಎಂದರು.
ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪಾಸಾದ ಮೂವರನ್ನು ಸನ್ಮಾನಿಸಲಾಗುವುದು. ಅಂದು ಮುಂಜಾನೆ ೯ ರಿಂದ ಸಂಜೆ ೫ ಗಂಟೆವರಗೆ ಕಾರ್ಯಕ್ರಮದಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರೇರಣಾದಾಯಕ ತರಬೇತಿಯನ್ನು ನೀಡಲಾಗುತ್ತದೆ. ಕಳೆದ ೭ ವ?ದಿಂದ ಎಲ್ಲ ಸಮಾಜದ ಎಸ್,ಎಸ್ ಎಲ್ ಸಿ ಪಿಯುಸಿ ೯೦ಕಿಂತ ಹೆಚ್ಚು ಅಂಕ ಪಡದು ಪಾಸಾದ ಸನ್ಮಾನಿಸಿಕೊಂಡು ಬಂದಿದ್ದೇವೆ ಈ ನಮ್ಮ ಸಂಸ್ಥೆಯಿಂದ ಎಂದ ಅವರು ಕಾರಣ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕೆ ಆಗಮಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಘಟನೆ ಪರವಾಗಿ ಜೆಸಿಐ ಗೋಕಾಕ ಪ್ರೆಸಿಡೆಂಟ್ ರಜನಿಕಾಂತ ಮಾಳೋದೆ ಹೇಳಿದರು
ದಿ.೧೭ರಂದು ಬೆಳಗ್ಗೆ ೮ಘಂಟೆಯಿಂದ ಕಾರ್ಯಕ್ರಮದ ಸ್ಥಳದಲ್ಲಿ ರಿಜಿಸ್ಟ್ರೇ?ನ್ ಕೌಂಟರ್ ಪ್ರಾರಂಭವಿರುತ್ತದೆ. ಅಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು/ಪಾಲಕರು ನಿಮ್ಮ ನಿಮ್ಮ ಮಾಕ್ಸ್ ಕಾರ್ಡ ಪ್ರತಿಯನ್ನು ನೀಡಿ ಅಥವಾ ಮಾರ್ಕ್ಸ ಕಾರ್ಡ ತೋರಿಸಿ ನೊಂದಣಿ ಮಾಡಿಸಿಕೊಳ್ಳಬೇಕು.ಹೆಚ್ಚಿನ ವಿವರಗಳಿಗಾಗಿ ೯೪೪೮೨೨೫೦೪೬,೮೦೮೮೮೯೭೬೮೮,೮೨೭೭೫೩೮೯೬೮ ಸಂಪರ್ಕಿಸಲು ವಿನಂತಿಸಿದ್ದಾರೆ. ಈ ಸಮಯದಲ್ಲಿ ಜೆಸಿಐ ಸಂಸ್ಥೆಯ ಶೇಖರ ಉಳ್ಳೇಗಡ್ಡಿ, ಕೆ ಆರ್ ದಬಾಡಿ, ಯುವ ಮುಖಂಡ ಸುಭಾಸ ಗೂಡ್ಯಾಗೋಳ ಉಪಸ್ಥಿತರಿದ್ದರು.
ಫೋಟೋ ಫೈಲ್ ನೇಮ್ : ೧೧ ಮೂಡಲಗಿ ೧