ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಸಮಿತಿ ಅಥಣಿ ಇವರಿಂದ  ಪ್ರತಿಭಾ ಪುರಸ್ಕಾರ

Ravi Talawar
ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಸಮಿತಿ ಅಥಣಿ ಇವರಿಂದ  ಪ್ರತಿಭಾ ಪುರಸ್ಕಾರ
WhatsApp Group Join Now
Telegram Group Join Now
ಅಥಣಿ: ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟ ಎಸ್.ಸಿ, ಎಸ್ ಟಿ ಸಮುದಾಯಗಳಿಗೆ  ಬಾಬಾಸಾಹೇಬ ಡಾ// ಅಂಬೇಡ್ಕರ್ ಅವರು ತಮ್ಮ ಹೋರಾಟದ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟರು. ಅದರ ಪ್ರತಿಫಲವಾಗಿ ನಮ್ಮ ಸಮುದಾಯವದರು ಶಿಕ್ಷಣವನ್ನು ಮತ್ತು  ಸರಕಾರಿ ನೌಕರಿಗಳನ್ನು ಪಡೆಯುವಂತಾಯಿತು ಆದರೆ ಈಗ  ಪ್ರಸ್ತುತ ದಿನಮಾನಗಳಲ್ಲಿ ಜಾಗತಿಕರಣ, ಖಾಸಗಿಕರಣದ, ಪರಿಣಾಮವಾಗಿ ಹಾಗೂ ಬಂಡವಾಳ ಶಾಹಿಗಳು ಶಿಕ್ಷಣ ಕ್ಷೇತ್ರವನ್ನು ವ್ಯಾಪಾರಿಕಣಗೊಳಿಸಿದ್ದರಿಂದ  ನಮ್ಮ ಸಮೂದಾಯದ ಮಕ್ಕಳ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಹಾಗೂ ಅವರು  ದುಶ್ಚಟಗಳಿಗೆ ಬಲಿಯಾಗುತ್ತಿರುವದರಿಂದ ಅವರನ್ನು ಜಾಗೃತಗೊಳಿಸುವದು ಹಾಗೂ ಸುಶಿಕ್ಷಿತರಾಗುವಂತೆ ಪ್ರೇರೆಪಿಸಲು ಡಾ|| ಬಿ ಆರ್ ಅಂಬೇಡಕರ ಸಮುದಾಯ ಸಮಿತಿ  ಅಥಣಿ  ಇವರಿಂದಾ ಅಥಣಿ ಹಾಗೂ  ಕಾಗವಾಡ ತಾಲೂಕುಗಳ ೨೦೨೪-೨೫ ನೇ ಸಾಲಿನ ಶೇ ೮೫ ಪ್ರತಿಶತ ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದಕ್ಕೆ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಸಮುದಾಯ ಸಮಿತಿಯವರು ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಭೆ ಸೇರಿದ ಡಾ// ಬಿ ಆರ್ ಅಂಬೇಡ್ಕರ್ ಸಮುದಾಯ ಸಮಿತಿ ಸದಸ್ಯರು ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ದ್ವೀತಿಯ ವರ್ಷದಲ್ಲಿ ಉತ್ತಿರ್ಣರಾಗಿ ಶೇ ೮೫ ಪ್ರತಿಶತಗಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಮುದಾಯದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ-೨೦೨೫” ಕಾರ್ಯಕ್ರಮವನ್ನು ಅಗಷ್ಟ ೩೧ರಂದು ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಬಂತೆಜೀ ಅಮರಜೋತಿ ಜ್ಞಾನಭೂಮಿ ಬುದ್ದವಿಹಾರ ಗುಲಬರ್ಗಾದ  ಸ್ವಾಮಿಜಿ,  ಬಂತೆಜೀ ಜ್ಞಾನಜ್ಯೋತಿ ದಮ್ಮ ಭೂಮಿ ಗೂಗವಾಡ, ಉದ್ಘಾಟಕರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ,  ಐಎಎಸ್ ಅಧಿಕಾರಿ ರಾಹುಲ್ ಸಿಂಧೆ, ಅದ್ಯಕ್ಷತೆ ಐಪಿಎಸ್ ಅಧಿಕಾರಿ ರವಿಂದ್ರ ಗಡಾದೆ ಸೇರಿದಂತೆ ಹಲವು ಜನ ಪ್ರಮುಖ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರುವರು ಎಂದು ಪ್ರಕಟನೆಯಲ್ಲಿ ತಿಳಿಸಿದರು

WhatsApp Group Join Now
Telegram Group Join Now
Share This Article