ಬೈಲಹೊಂಗಲ: ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕಿರಾಪೂರ ಅವರಿಗೆ ಮನವಿ ನೀಡಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಅಮ್ಮಿನಭಾವಿ ಮಾತನಾಡಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯ 100 ವರ್ಷದ ಸ್ಮರಣೆಗಾಗಿ ನಡೆಯುತ್ತಿರುವ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಅಳವಡಿಕೆ ಮಾಡಿರುವ ಬ್ಯಾನರ್ ಗಳಲ್ಲಿ ಭಾರತ ನಕ್ಷೆಯನ್ನು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಮುದ್ರಿಸಿರುವುದು ದೇಶದ್ರೋಹಿ ಕೃತ್ಯವಾಗಿದ್ದು ಕಾಂಗ್ರೆಸ್ ಪಕ್ಷದ ಮಾನಸಿಕತೆಯನ್ನು ಖಂಡಿಸಿ ಮತ್ತು ಈ ಕೃತ್ಯ ಮಾಡಿದವರ ಮೇಲೆ ಈ ಕೂಡಲೇ ಅತ್ಯಂತ ಕಠಿಣ ಕ್ರಮ ಜರುಗಿಸಿ ಮತ್ತು ಆ ಬ್ಯಾನರ್ ಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ ಮಾತನಾಡಿ ಮಹಾತ್ಮ ಗಾಂಧೀಜಿಯವರಿಗೂ ಹಾಗೂ ಪ್ರಸ್ತುತ ಇರುವ ಕಾಂಗ್ರೇಸ್ ಗೆ ಯಾವುದೇ ಸಂಬಂಧ ವಿರದೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಮಾಡುತ್ತಿರುವ ಕಾಂಗ್ರೆಸ್ಸಿನ ಕಾರ್ಯಕ್ರಮಕ್ಕೆ ಖಂಡಿಸುತ್ತೇವೆ. ಮಹಾತ್ಮ ಗಾಂಧೀಜಿಯವರು ನಮ್ಮ ಇಡೀ ದೇಶದ ಆಸ್ತಿ ಹಾಗಾಗಿ ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜನೆ ಮಾಡದಿರುವುದು ದುರದೃಷ್ಟಕರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾ.ಜ.ಪಾ ಮುಖಂಡ ಮಂಜುನಾಥ ಮರಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಗೌಡಪ್ಪ ಹೊಸಮನಿ, ಸದಾಶಿವ ಪಾಟೀಲ,ಆತ್ಮಾನಂದ ಅಬ್ಬಾಯಿ,ನಾಗಪ್ಪ ಸಂಗೊಳ್ಳಿ, ವಿನಾಯಕ ಹಂಪಣ್ಣವರ,ರಾಜು ಗುಡಿಮನಿ,ಸಂತೋಷ ಕಮತಗಿ, ಬಸವರಾಜ್ ಪರವಣ್ಣವರ,ಸುನಿಲ್ ಶೀಲವಂತರ ಹಾಗೂ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು