ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳಿಗೆ ಸೇರಿಸುವ ಕಾರ್ಯ ಆಗಬೇಕು : ಪ್ರಶಾಂತ ಕಾಳೆ

Hasiru Kranti
ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳಿಗೆ ಸೇರಿಸುವ ಕಾರ್ಯ ಆಗಬೇಕು : ಪ್ರಶಾಂತ ಕಾಳೆ
WhatsApp Group Join Now
Telegram Group Join Now

ಇಂಡಿ : ಇಂಡಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು.

ಸದ್ಯಸ್ಯ ಕಾರ್ಯದರ್ಶಿ ಹಾಗೂ  ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ.ಭೀಮಾಶಂಕರ ಕನ್ನೂರ ಸರ್  ರವರು ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಸ್ವಾಗತ ಕೋರಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಶಾಂತ ಕಾಳೆ ರವರು ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿಯಲ್ಲಿ ಅನುಸ್ಥಾನಗೊಂಡಿದ್ದು ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಈ ಯೋಜನೆಗಳಿಗೆ ಸೇರಿಸುವ ಕಾರ್ಯ ಆಗಬೇಕೆಂದು ಸೂಚಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರುಗಳಾದ  ಶ್ರೀ ಮಹೇಶ ಶಿ ಹೊನ್ನಬಿoದಗಿ , ಶ್ರೀ ಸಂಜಕುಮಾರ್ ಲ ನಾಯ್ಕೊಡಿ , ಶ್ರೀ ಸತೀಶ ಶ ಹತ್ತಿ , ಶ್ರೀಮತಿ ನಿರ್ಮಲ ಅ ತಳಕೇರಿ ,ಶ್ರೀಮತಿ ಶೈಲಜಾ ಜಾಧವ ,  ಶ್ರೀ ಶಶಿಕುಮಾರ ಮಠ , ಶ್ರೀ ಸಿದ್ದು ಲ ಕಟ್ಟಿಮನಿ ,ಶ್ರೀ ಪ್ರಭು ಶ್ರೀ ಕುಂಬಾರ ,ಶ್ರೀ  ಸಂಕೇತ ಬಾ ಜೋಶಿ , ಶ್ರೀ ಮಲೇಶಿ ಜ ಬೋಸಗಿ ,ಶ್ರೀ ರುದ್ರಗೌಡ ಸು ಆಳಗೊಂಡ , ಶ್ರೀ ಭೀಮರಾಯ ರಾ ಮೇತ್ರಿ , ಶ್ರೀ ಸೋಮಣ್ಣ ಭಿ ಪ್ರಚಂಡಿ , ಶ್ರೀ ಅಜಿತ ಸೂ ಜೀರಗಿ, ಯೋಜನಾಧಿಕಾರಿಗಳು ತಾಲೂಕ ಪಂಚಾಯತ ಇಂಡಿ ಶ್ರೀ ನಂದೀಪ ರಾಠೋಡ ಸರ್ , ಹಾಗೂ ತಾಲೂಕಿನ ಎಲ್ಲ  ಇಲಾಖೆಗಳ ಅಧಿಕಾರಿಗಳು ,ತಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article