ಈಡಿಗ ಜನಾಂಗದ ಪ್ರಮುಖ ಬೇಡಿಕೆ ಈಡೇರಿಸುವಂತೆ ಬೆಂಗಳೂರಿಗೆ ಪಾದಯಾತ್ರೆ : ಪ್ರಣವಾನಂದ ಸ್ವಾಮೀಜಿ 

Pratibha Boi
ಈಡಿಗ ಜನಾಂಗದ ಪ್ರಮುಖ ಬೇಡಿಕೆ ಈಡೇರಿಸುವಂತೆ ಬೆಂಗಳೂರಿಗೆ ಪಾದಯಾತ್ರೆ : ಪ್ರಣವಾನಂದ ಸ್ವಾಮೀಜಿ 
WhatsApp Group Join Now
Telegram Group Join Now
ಬಳ್ಳಾರಿ: (ಡಿ. 13)  ಈಡಿಗ ಜನಾಂಗವನ್ನು ಸರ್ಕಾರ ಕಡೆಗಣಿಸುತ್ತಿದೆ ಈಡಿಗ ಬಿಲ್ಲವಾ ನಾಮಧಾರಿ ಇತ್ಯಾದಿ ಸೇರಿದಂತೆ ಸುಮಾರು 26 ಸಹ ಜಾತಿಗಳನ್ನು ಒಳಗೊಂಡ ಈಡಿಗ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಈಡೇರಿಸುವಂತೆ ಜನವರಿ 6   2026 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳು ಗ್ರಾಮ ದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ ಬೆಂಗಳೂರುವರೆಗೆ ಐತಿಹಾಸಿಕ 700 ಕಿಮೀ ಪಾದಯಾತ್ರೆ ನಡೆಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಅವರು ಇಂದು ನಗರದ  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಈಡಿಗ ಜನಾಂಗದ ಒಟ್ಟು 26  ಒಳ ಪಂಗಡಗಳ ಹಕ್ಕು ಮತ್ತು ಬೇಡಿಕೆಗಳನ್ನು  ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ  ಕರಿದಾಳು ನಿಂದ ಗುಲ್ಬರ್ಗ ರಾಯಚೂರು ಕೊಪ್ಪಳ ವಿಜಯನಗರ ಚಿತ್ರದುರ್ಗ ತುಮಕೂರು ಮೂಲಕ ಬೆಂಗಳೂರಿನವರೆಗೆ 700 ಕಿಲೋಮೀಟರ್ ದೂರವನ್ನು 41 ದಿನಗಳ ಪಾದಯಾತ್ರೆ ನಡೆಯಲಿದೆ ಬೆಂಗಳೂರಿನಲ್ಲಿ  ಈ ಪಾದಯಾತ್ರೆಗೆ ಈಡಿಗ  ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ತನು ಮನ ಧನದಿಂದ ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ಸ್ವಾಮೀಜಿ ಈಡಿಗ ಸಮುದಾಯದ ಜನರಲ್ಲಿ ಮನವಿ ಮಾಡಿದರು.
ಪಾದಯಾತ್ರೆಯ ಪ್ರಮುಖ ಬೇಡಿಕೆಗಳು ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ರೂ ತಕ್ಷಣ ಬಿಡುಗಡೆ. ಕಲ್ಯಾಣ ಕರ್ನಾಟಕ ಭಾಗದ ಕುಲಕಸುಬು ಕಳೆದುಕೊಂಡ ಈಡಿಗರಿಗೆ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು ಈಡಿಗ  ಸಮಾಜವನ್ನು ಈಗಿರುವ 2A ಯಿಂದ ST ಮೀಸಲಾತಿಗೆ ಸೇರಿಸುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಬ್ರಹ್ಮಶ್ರೀ ನಾರಾಯಣಗುರು  ಪುತ್ಥಳಿಯನ್ನು ವಿಧಾನಸೌಧ ಎದುರು ಸ್ಥಾಪಿಸಬೇಕು, ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಮೇಲಿನ ಮೊಕದ್ದಮೆಗಳನ್ನು ತಕ್ಷಣ ಹಿಂತೆಗೆದು ಭದ್ರತೆ ಹಾಗೂ ಭೂಮಿ ಮಂಜೂರು ಮಾಡಬೇಕು. ಮದ್ಯ ಮಾರಾಟದಲ್ಲಿ ಸಮಾಜದ 26 ಪಂಗಡಗಳಿಗೆ 50% ಮೀಸಲಾತಿ. ಕೋಟಿಚೆನ್ನಯ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಬಜೆಟ್‌ನಲ್ಲಿ ₹100 ಕೋಟಿ ರೂ ಮಂಜೂರು ಮಾಡಬೇಕು.  ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ನಾರಾಯಣಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕೆಂಬ ಹೆಂಡದ ಮಾರಯ್ಯ ಜಯಂತಿಯನ್ನು ಸರ್ಕಾರಿ ಆಚರಣೆಗೆ ಘೋಷಣೆ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಅಥವಾ ಭರವಸೆಯನ್ನೇ ಆದರೂ ನೀಡಬೇಕು ಆಗ ಮಾತ್ರ ಈ ಪಾದಯಾತ್ರೆಯನ್ನು ಹಿಂಪಡೆಯಲಾಗುವುದು ಎಂದರು.
 ಈ ಪತ್ರಿಕಾಗೋಷ್ಟಿಯಲ್ಲಿ ಎಸ್ ಪ್ರಕಾಶ್ ಶ್ರೀನಿವಾಸ್ ಕೃಷ್ಣಮೂರ್ತಿ ದಯಾನಂದ ರಾಜೇಶ್  ಅಸುಂಡಿ ರಾಜು ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article