ಬೆಂಗಳೂರು, ಸೆಪ್ಟೆಂಬರ್ 11: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಇದೀಗ ಅದರಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಸುಮಾರು 1632 ಪುಟಗಳ ಚಾರ್ಜ್ಶೀಟ್ನಲ್ಲಿ 113 ಸಾಕ್ಷಿಗಳನ್ನು ಎಸ್ಐಟಿ ಉಲ್ಲೇಖಿಸಿದೆ. ಇಷ್ಟೇ ಅಲ್ಲದೆ, ಪ್ರಜ್ವಲ್ ದೌರ್ಜನ್ಯ ಯಾವ ರೀತಿ ಇತ್ತು ಎಂಬುದನ್ನು ವಿವರಿಸಲಾಗಿದೆ.
ಬಲವಂತವಾಗಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಲ್ಲದೆ, ಅದರ ವೀಡಿಯೊವನ್ನೂ ಮಾಡಿಕೊಂಡಿದ್ದ. ಇದಾದ ಬಳಿಕ ಬಸವನಗುಡಿಯ ಮನೆ ಕ್ಲೀನ್ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದ. ಬಟ್ಟೆ ಒಗೆಯಲು ತೆಗೆದುಕೊಂಡು ಹೋಗು ಎಂದು ಕೊಠಡಿಗೆ ಕರೆದಿದ್ದ ಪ್ರಜ್ವಲ್, ಮಹಿಳೆ ಕೊಠಡಿಯೊಳಕ್ಕೆ ಹೋಗಲು ಹಿಂಜರಿದಾಗ ಗದರಿದ್ದ. ರೂಂ ಒಳಗೆ ಹೋಗ್ತಿದ್ದಂತೆ ಚಿಲಕ ಹಾಕಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರಿದ್ದಾರೆ ಎಂಬುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.