ಬಳ್ಳಾರಿ. ( ಪಿ. ಡಿ. ಹಳ್ಳಿ ). ಡಿ. 22 – ಭಾರತವು ಸುಮಾರು 200 ವರ್ಷಗಳ ಕಾಲ ಆಳ್ವಿಕೆ ಮಾಡಿದಂತಹ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವತಂತ್ರವನ್ನು ಪಡೆದುಕೊಂಡಿರುತ್ತಾರೆ 47ರಿಂದ ಭಾರತವು ಪಾಕಿಸ್ತಾನ ವಿರುದ್ಧ 4 ಬಾರಿ ಯುದ್ಧವನ್ನು ಮಾಡಿದೆ 1947.1965 ಹಾಗೂ 1971.1999 ಹಾಗೂ ಸರ್ಜಿಕಲ್ ಸ್ಟ್ರೈಕ್.ಆಪರೇಷನ್ ಸಿಂಧೂರ. ಹೀಗೆ ಭಾರತವು 28 ರಾಜ್ಯಗಳು ಎಂಟು ಕೇಂದ್ರ ಆಡಳಿತ ಪ್ರದೇಶಗಳನ್ನು ಹೊಂದಿರುವ ಈ ನಮ್ಮ ಭವ್ಯ ಭಾರತವನ್ನು ಯಾವ ರೀತಿಯಲ್ಲಿ ತಮ್ಮ ಸೈನಿಕರು ಕರ್ತವ್ಯವನ್ನು ನಿಭಯಸುತ್ತಿದ್ದಾರೆ ಸೈನಿಕರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಹಗಲು ರಾತ್ರಿ ಎನ್ನದೆ ದಟ್ಟವಾದ ಕಾಡುಗಳಲ್ಲಿ ಹಾಗೂ ಹಿಮ ಪರ್ವತಗಳಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು 24/7 ಗಂಟೆಗಳ ಕಾಲ ಕರ್ತವ್ಯದಲ್ಲಿ ತೊಡಗಿರುತ್ತಾರೆ ಹಾಗೂ 22 ವರ್ಷಗಳ ಕಾಲ ತನ್ನ ಯವ್ವನವನ್ನು ಈ ಭಾರತಾಂಬೆಯ ಮಡಿಲಿಗೆ ಸಮರ್ಪಿಸಿಕೊಳ್ಳುತ್ತಾರೆ. ಒಂದು ತಾಯಿಯು ಒಂಬತ್ತು ತಿಂಗಳ ಮಗುವನ್ನು ಗರ್ಭದಲ್ಲಿ ಯಾವ ರೀತಿ ಲಾಲನೆ ಪಾಲನೆ ಮಾಡುತ್ತಾಳೆ ಅದೇ ತರಹ ನಮ್ಮ ಪ್ರಾಣವನ್ನು ರಕ್ಷಿಸುತ್ತಾ ಸೈನಿಕರು ಭಾರತಾಂಬೆಯನ್ನು ಕಾಪಾಡಿಕೊಳ್ಳುತ್ತಾರೆ ನಮಗೆ ನಮ್ಮ ಮನೆಯೊಂದೇ ಆದರೆ ಅವರಿಗೆ ಇಡೀ ದೇಶವೇ ಒಂದು ಮನೆ ಇದ್ದಂತೆ ಎಂದು ಮಾಜಿ ಅರೆಸೇನಾಪಡೆಯ ಸೈನಿಕರಾದ ಪ್ರಹ್ಲಾದ್ ರೆಡ್ಡಿ ವಿದ್ಯಾರ್ಥಿಗಳಲ್ಲಿ ಮಾಹಿತಿಯನ್ನು ನೀಡಿದರು.
ಅವರು ಇಂದು ತಾಲೂಕಿನ ಪರಮದೇವನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ನಕ್ಸಲ್ ಎಂದರೇನು ಉಗ್ರವಾದಿಗಳೆಂದರೇನು, ಇವರ ಮಧ್ಯೆ ಇರುವ ವ್ಯತ್ಯಾಸಗಳೇನು? ಹಾಗೂ ಇವರಿಂದ ಯಾವ ರೀತಿಯಾಗಿ ಭಾರತಾಂಬೆಯನ್ನು ಕಾಪಾಡಿಕೊಳ್ಳುತ್ತಾರೆ 28 ರಾಜ್ಯಗಳಲ್ಲಿ 14 ರಾಜ್ಯಗಳು ನಕ್ಷತ್ರ ಪ್ರದೇಶವಾಗಿರುತ್ತವೆ ಯಾವ ರಾಷ್ಟ್ರಗಳು ಯಾವ ರಾಜ್ಯದ ಗಡಿಭಾಗವನ್ನು ಹೊಂದಿದೆ ಅದರ ವಿಸ್ತೀರ್ಣ ಎಷ್ಟು? ಅಲ್ಲಿ ಯಾವ ಸೈನಿಕರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನು ಮಾಜಿ ಸೈನಿಕ ಪ್ರಹಲ್ಲಾದ ರೆಡ್ಡಿ ಮತ್ತು ಶೇಕ್ ಸಾಬ್ ಇವರುಗಳು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಘಟಕದ ಮಾಜಿ ಸೈನಿಕರಾದ .ಈಶ್ವರ ರೆಡ್ಡಿ ಪ್ರವೀಣ್ ಕುಮಾರ್ ಗೋವಿಂದು ಲಕ್ಷ್ಮಣ್ ವೀರೇಶ್ ಮತ್ತು ಎಂ ಆರ್ ರೆಡ್ಡಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಗೋಪಾಲ್ ಸಾಗರ್ ಉಪನ್ಯಾಸಕರಾದ ಮಂಜುನಾಥ್ ಸರ್ ಯಶೋಧ ಬಸವರಾಜ್ ಹಾಗೂ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ್ ಹಾಗೂ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತ್ತು ಗ್ರಾಮ ಲೆಕ್ಕಾಧಿಕಾರಿಯಾದ ವೈಜನಾಥ್ ಪರಮದೇವನಹಳ್ಳಿಯ ಗ್ರಾಮದ ಪಂಚಾಯತ್ ಅಧ್ಯಕ್ಷರು ಹಾಗೂ ಗುತ್ತಿಗೆದಾರರಾದ ಶಿವರಾಜ್ ಇವರುಗಳು ಉಪಸ್ಥಿತರಿದ್ದರು ಕಾಲೇಜಿನ ವತಿಯಿಂದ ಮಾಜಿ ಅರೆ ಸೈನಿಕರಿಗೆ ಸನ್ಮಾನ ಮಾಡಲಾಯಿತು.


