ಮುಗಳಖೋಡ,06: ಇಂದು ಮಾನವ ಸುಂದರವಾದ ಜೀವನ ಕಳೆಯಬೇಕಾದರೆ ದಾನ ಧ್ಯಾನ ದಿಂದ ಸಾದ್ಯ, ಇಂದು ಅತಿಆಸೆಯಿಂದ ಜಡತ್ವದಡೆಗೆ ಸಾಗಿ ನೆಮ್ಮದಿಯನ್ನೆ ಕಳೆದುಕೊಳ್ಳುತ್ತಿದ್ದಾನೆ , ಇಂತಹ ಸತ್ಸಂಗದಲ್ಲಿ ಭಾಗಿಯಾಗಿ ಸುಂದರ ಜೀವನ ಕಳೆಯಲು ಸಾಧ್ಯವಿದೆ ಎಂದು ಇಂಚಗೇರಿ ಸಂಪ್ರದಾಯದ ಪ್ರಭು ಮಹಾರಾಜರು ಹೇಳಿದರು.
ಸೋಮವಾರ ದಿ 6 ರಂದು ಪಟ್ಟಣದ ಇಂಚಗೇರಿ ಸಾಂಪ್ರದಾಯದ ಸಂತ ಭೀಮಪ್ಪ, ಈರಪ್ಪ ಯಡವಣ್ಣವರವರ ಪುಣ್ಯಸ್ಮರನೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಜೀವನುದ್ದಕ್ಕೂ ಪರೋಪಕಾರ ಪರಪುಣ್ಯವನ್ನು ಯಾರು ತಮ್ಮ ಕಾಯಕ ಮಾಡಿಕೊಂಡಿರುತ್ತಾರೆಯೋ ಅಂತವರು ಮಾತ್ರ ಪುಣ್ಯಸ್ಮರನೋತ್ಸವ ಆಚರಿಸಿಕೊಳ್ಳುತ್ತರೆ. ಅಂತಹ ಸ್ಥಾನ ಪಡೆದ ಯಡವಣ್ಣವರವರ ಈ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿಯಾದ ನೀವೂ ಪುಣ್ಯದ ಕಾಯಕ ಮಾಡಿ ಗುರು ಕೃಫೆಗೆ ಪಾತ್ರರಾಗಿದ್ದಿರಿ ಎಂದು ಆರ್ಶೀವಚನ ನೀಡಿದರು.
ಇಂಚಗೇರಿಯ ಅರವಿಂದ ವಕೀಲ ಮಹಾರಾಜರು ,ಪುರಸಭೆ ಸದಸ್ಯರು ಸಂತ ಮಹಾಂತರು , ಪುರಸಭೆ ಸದಸ್ಯ ಚೇತನ ಯಡವಣ್ಣವರ, ಪುಂಡಲೀಕ ಗೋಕಾಕ, ಗುತ್ತಿಗೆದಾರ ಗೋಪಾಲ ಯಡವಣ್ಣವರ, ಶರಣ ಶರಣೆಯರು, ಹಾಗೂ ಸಕಲ ಸಂಪ್ರದಾಯದ ಸದ್ಭಕ್ತರು ಇದ್ದರು.