ಕಂಡಕ್ಟರ್‌ ಮೇಲಿನ ಪೋಕ್ಸೋ ಕೇಸ್‌ ವಾಪಸ್‌: ಮಾರಿಹಾಳ ಸಿಪಿಐ ಗುರುರಾಜ್‌ ಟ್ರಾನ್ಸಫರ್‌

Ravi Talawar
ಕಂಡಕ್ಟರ್‌ ಮೇಲಿನ ಪೋಕ್ಸೋ ಕೇಸ್‌ ವಾಪಸ್‌: ಮಾರಿಹಾಳ ಸಿಪಿಐ ಗುರುರಾಜ್‌ ಟ್ರಾನ್ಸಫರ್‌
WhatsApp Group Join Now
Telegram Group Join Now

ಬೆಳಗಾವಿ, ಫೆಬ್ರವರಿ 25: ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕ ಮಹಾದೇವಪ್ಪ  ಮೇಲೆ ನೀಡಿರುವ ಪೋಕ್ಸೋ  ದೂರನ್ನು ವಾಪಸ್​​ ಹಿಂಪಡೆದಿದ್ದೇವೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆಯ ತಾಯಿ, ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ​ ಅವರ ಮೇಲೆ ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ ಎಂದರು.

ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ, ಆಕ್ರೋಶ ವ್ಯಕ್ತವಾಗಿದೆ. ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಇಂದು (ಫೆ.25) ಬೆಳಗಾವಿ ಪೊಲೀಸ್ ಆಯುಕ್ತರಿಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.

ಕರ್ತವ್ಯಲೋಪ ಆರೋಪದ ಮೇಲೆ ಮಾರಿಹಾಳ ಠಾಣೆ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವರ್ಗಾವಣೆಯಾಗಿದ್ದಾರೆ. ಮಾರಿಹಾಳ ಠಾಣೆಯಿಂದ CCRBಗೆ ವರ್ಗಾವಣೆ ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದರೆ. ಮಾರಿಹಾಳ ಠಾಣೆಗೆ CCRB ಇನ್ಸ್​​ಪೆಕ್ಟರ್​ ಮಂಜುನಾಥ್ ನಾಯಕ್​ರನ್ನು ನಿಯುಕ್ತಿಗೊಳಿಸಲಾಗಿದೆ. ಇನ್ನು, ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ‌ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

WhatsApp Group Join Now
Telegram Group Join Now
Share This Article