ಗದಗ, 23. ಸಾಧನೆ ಮಾಡಲು ಮಕ್ಕಳಲ್ಲಿ ಛಲ ಮತ್ತು ಆತ್ಮಸ್ಥೆರ್ಯ ಇರಬೇಕು. ವಿದ್ಯೆ ಪಡೆಯಲು ಬಡತನ ಎಂದೂ ಅಡ್ಡಿಯಾಗಲಾರದು. ಉತ್ತಮವಾಗಿ ಓದಿ ಮಾನವೀಯ ಮೌಲ್ಯದೊಂದಿಗೆ ಭಾವಿ ಜೀವನ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರೊಂದಿಗೆ ಹೆತ್ತ ತಂದೆ-ತಾಯಿಯರಿಗೆ ಕೀರ್ತಿ ತರಬೇಕು ಎಂದು ಸೃಷ್ಠಿ ಮಹಿಳಾ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷರು ಚೇತನಾ ಸೀತಾರಹಳ್ಳಿ ಕರೆ ನೀಡಿದರು.
ಸೃಷ್ಠಿ ಮಹಿಳಾ ವಿವಿಧೋದ್ದೇಶಗಳ ಸಂಘದ ಕಚೇರಿಯಲ್ಲಿ ಅವರು ಕಳೆದ ಎಪ್ರೀಲ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಮಾತನಾಡಿದರು.
ಈ ವೇಳೆ ಭೂಮಿಕಾ ಪ್ರಶಾಂತ ಬಾಗಲಕೋಟ, ಹಾಗೂ ವಿದ್ಯಾ ಬಸವರಾಜ ಚಲವಾದಿ ಇವರನ್ನು ಸನ್ಮಾನಿಸಿಲಾಗಿಯಿತು. ಸೃಷ್ಠಿ ಮಹಿಳಾ ವಿವಿಧೋದ್ದೇಶಗಳ ಸಂWಧ ಪದಾಧಿಕಾರಿಗಳಾದ ಸುಧಾ ಎಸ್. ಕಟ್ಟಿಮನಿ, ಶೋಭಾ ಸಿ. ಗಡಾದ, ರೇಣುಕಾ ಆರ್. ಗಡಾದ, ರೇಖಾ ಎಂ. ಬಾಗಲಕೋಟ, ಹನಮಕ್ಕ ವಾಯ್. ಗೋಕಾವಿ, ಅನಿತಾ ಆರ್. ಗೋಕಾಕ, ಶೋಭಾ ಗೋಕಾಕ, ಉಷಾ ಮಾನಪಟಿ ಉಪಸ್ಥಿತರಿದ್ದರು.23