ಬಳ್ಳಾರಿ ಎಪಿಎಂಸಿಯಲ್ಲಿ ಹಮಾಲರ ಮುಷ್ಕರ : ತೂಕವಾಗದ ಫಸಲು

Sandeep Malannavar
ಬಳ್ಳಾರಿ ಎಪಿಎಂಸಿಯಲ್ಲಿ ಹಮಾಲರ ಮುಷ್ಕರ : ತೂಕವಾಗದ ಫಸಲು
WhatsApp Group Join Now
Telegram Group Join Now
ಬಳ್ಳಾರಿ, ಫೆ.04.. ತಮಗೆ ಹೆಚ್ಚಿನ ಹಮಾಲಿ ಶುಲ್ಕ ನೀಡಬೇಕು ಎಂದು ಅಂಗಡಿಯ ಹಮಾಲರು ನಡೆಸುತ್ತಿರುವ ಮುಷ್ಕರದಿಂದ ಇಂದು ಮಧ್ಯಾಹ್ನದವರೆಗೆ ರೈತರು ಮಾರುಕಟ್ಟೆಗೆ ತಂದ ಫಸಲು ಮಾರಾಟವಾಗದೇ ಇದೆ.
ಮಾರುಕಟ್ಟೆ ಸಮಿತಿಯ ನಿಯಮಾವಳಿಯಂತೆ ಹಮಾಲರಿಗೆ ಶೇ 20 ರಷ್ಟು ಹಮಾಲಿ ಧರ ಹೆಚ್ಚಳಮಾಡಲಾಗಿದೆಯಂತೆ. ಆದರೆ ಖರೀದಿದಾರರಿಂದ ಖಾಲಿ ಚೀಲದ ಗಟ್ಟ ತರಲೂ ಶುಲ್ಕ ನೀಡಬೇಕೆಂಬುದು ನಿನ್ನೆಯಿಂದ ಮುಷ್ಕರ ಆರಂಭಿಸಿದ್ದರು.
ಈ ಕುರಿತು ಹಮಾಲರು ಮತ್ತು ಖರೀದಿದಾರರ ಸಭೆ ನಡೆಸಿದ ಮಾರುಕಟ್ಟಿ ಸಮಿತಿ. ಖರೀದಿದಾರರೇ ಖಾಲಿ ಚೀಲ ತರಲಿದ್ದಾರೆ ಎಂದು ನಿರ್ಧರಿಸಿದರು.
ಇಂದು ಟೆಂಡರ್ ಪ್ರಕ್ರಿಯೆ ನಡೆಯಿತು. ಖರೀದಿದಾರರ ಹಮಾಲರು ಬಂದಿದ್ದರು. ಆದರೆ ಅಂಗಡಿ ಹಮಾಲರು ನಮಗೇ ಖಾಲಿ ಚೀಲ ತರುವ ಶುಲ್ಕ ನೀಡಬೇಕೆಂದು ಮಧ್ಯಾಹ್ನದ ವರೆಗೆ ತೂಕ ಹಾಕಲು ಬಂದಿರಲಿಲ್ಲ.
ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಅವರು ಹಮಾಲರ ಮುಖಂಡರ ಸಭೆ ಕರೆದು ಮಾತುಕತೆ ನಡೆಸಿದ್ದರು. ಇತ್ತ ಮಾರುಕಟ್ಟೆಗೆ ಮೆಕ್ಕೆಜೋಳ ಮೊದಲಾದ ಫಸಲು ತಂದಿದ್ದ ರೈತರು ಮಾತ್ರ ತಮ್ಮ ಮಾಲು ಮಾರಾಟವಾಗದೇ ಇದ್ದುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article