ಹುಬ್ಬಳ್ಳಿ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟನ ಕಾರ್ಯಾಧ್ಯಕ್ಷರು, ಸಮಾಜಪರ ಚಿಂತಕರಾದ ಸರಳ ಸಜ್ಜನ ಮುಖಂಡ ರಾಜಶೇಖರ ಮೆಣಸಿನಕಾಯಿ ಅವರ ಧರ್ಮಪತ್ನಿ ಪೂಜಾ ರಾಜಶೇಖರ ಮೆಣಸಿನಕಾಯಿ ಅವರು ಲಿಂಗೈಕ್ಯರಾಗಿದ್ದಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಮೃತರ ಮನೆಗೆ ತೆರಳಿ, ಪೂಜಾ ರಾಜಶೇಖರ ಮೆಣಸಿನಕಾಯಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆ ಮಹಾನ್ ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ. ಮುಖಂಡ ರಾಜಶೇಖರ ಮೆಣಸಿನಕಾಯಿ ಮತ್ತು ಮಕ್ಕಳಿಗೆ ಸಾಂತ್ವನ ನುಡಿಗಳನ್ನು ಹೇಳಿದರು. ಪೂಜಾ ಅವರ ಅಗಲಿಕೆಯ ದುಃಖ ಸಹಿಸುವ ಸಾಮರ್ಥ, ಸಹನೆ, ಶಕ್ತಿ, ಮಾನಸಿಕ ದೈರ್ಯ ನೀಡಿ ದಯಾಘನ ಪರಮಾತ್ಮ ಹರಸಲಿ ಎಂದು ಪ್ರಾರ್ಥಿಸಿದರು.
ಪೂಜಾ ಅವರ ಅಗಲಿಕೆಗೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾನ್ ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ. ಉದ್ಯಮಿ ರಮೇಶ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಸಮರ್ಥ, ಸುಮಿತ, ನಂದಕುಮಾರ ಪಾಟೀಲ, ಸಚಿವರು, ಹಲವಾರು ಗಣ್ಯರು, ಉಪಸ್ಥಿತರಿದ್ದರು.
ನಂದಕುಮಾರ