ಧಾರವಾಡ : ಚುನಾವಣೆಯಲ್ಲಿ ರಾಜಕೀಯ ವ್ಯಕ್ತಿಗಳು ಕೂಡಿಕೊಂಡು, ವಿದ್ಯಾವರ್ಧಕ ಸಂಘದ ಚುನಾವಣೆ ಎದುರಿಸುತ್ತಿದ್ದಾರೆ ಎಂದು, ವಿರೋಧಿ ಬಣ ಹೇಳುತ್ತಿದೆ.
ಆದರೆ ರಾಜಕೀಯ ಮಾಡಲು ಬಹಳಷ್ಡು ಕ್ಷೇತ್ರಗಳು ಇವೆ. ನಾನು ವಿದ್ಯಾವರ್ಧಕ ಸಂಘದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ಮಾಡುವುದಿಲ್ಲಾ. ವಿದ್ಯಾವರ್ಧಕ ಸಂಘದಲ್ಲಿ ರಾಜಕೀಯ ನಡೆಯಬಾರದು ಎನ್ನುವ ದೃಷ್ಟಿಯಿಂದ ವಿದ್ಯಾವರ್ಧಕ ಸಂಸ್ಥೆ ಶ್ರೇಯೋಭಿವೃದ್ಧಿ ಆಗಬೇಕೆಂದು ನಾವು ಚುನಾವಣೆಗೆ ನಿಂತಿದ್ದೇವೆ ಎಂದು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬೀಕಾಯಿ ಹೇಳಿದರು.
ಧಾರವಾಡದ ಕೆಂಪಗೇರಿಯಲ್ಲಿ ಪಾಪು ಅಭಿಮಾನಿ ಬಳಗದ ಅಭ್ಯರ್ಥಿಗಳು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ಮಾತನಾಡಿ, ಬಹುತೇಕ ಎಲ್ಲಾ ಮತದಾರರನ್ನು ನಾವು ಭೇಟಿಯಾಗಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಮತದಾರರನ್ನು ಭೇಟಿಯಾಗಿದ್ದು, ವಿದ್ಯಾವರ್ಧಕ ಸಂಘದ ಬಗ್ಗೆ ಅಭಿವೃದ್ಧಿ ಚಿಂತನೆ ಹೊಂದಿದವರು ಇದ್ದಾರೆ. ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ.
ವೀರಣ್ಣಾ ರಾಜೂರು ಅವರು ಅವಿರೋಧವಾಗಿ ಆಯ್ಕೆಯಾದರೆ ನಮ್ಮ ಬೆಂಬಲ ಸದಾ ಇರುತ್ತೆ. ಅದಕ್ಕಾಗಿ ನಾವು ಒಗ್ಗಟಾಗಿ ಕೆಲಸ ಮಾಡುತ್ತೇವೆ. ಅವರ ಅವಿರೋಧ ಆಯ್ಕೆಯಾದ್ರೆ ಸಾರಸ್ವತ ಲೋಕಕ್ಕೆ ಸಿಗುವ ಗೌರವ ಅಂತಾ ವಿಚಾರ ಮಾಡಿದ್ವಿ. ಆದೆ ಅದು ಅವಿರೋಧ ಆಗಲಿಲ್ಲಾ. ಚುನಾವಣೆ ನಡೆಯುತ್ತಿದೆ.
ಎಸ್ಎಸ್ಎಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಗುಣಮಟ್ಟದ ಕಾರ್ಯಾಗಾರವನ್ನು ಮಾಡಿದ್ದೇವೆ ಎಂದು ಚುನಾವಣೆಗೆ ನಿಂತಿರುವ ವಿರೋಧಿ ಬಣ ಹೇಳಿದೆ. ಅದು ಎಷ್ಟರಮಟ್ಟಿಗೆ ಸಫಲತೆ ಆಗಿದೆ ಎನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದರು.
ಬಾಕ್ಸ- ಚಂದ್ರಕಾಂತ ಬೆಲ್ಲದ ಅವರ ಮಾತಿಗೆ ತಿರುಗೇಟು
– ಮೋಹನ ಲಿಂಬೀಕಾಯಿ ಅವರಿಗೆ ಮತದಾರರು ಈ ಬಾರಿ ಪಾಠ ಕಲಿಸುತ್ತಾರೆ ಎಂದು ಹೇಳಿದ್ದು, ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ಬಾಕ್ಸ- ಚಂದ್ರಕಾಂತ ಬೆಲ್ಲದ ಅವರಿಗೆ ತಂದೆಯಷ್ಟೇ ಗೌರವ ಕೊಡುತ್ತೇನೆ.
ಚಂದ್ರಕಾಂತ ಬೆಲ್ಲದ ಅವರು, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಮಯದಲ್ಲಿ, ಯಾವುದೇ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಲ್ಲಾ. ಅವರು ನನ್ನ ತಂದೆಯ ಸಮಾನರಾಗಿ ಗೌರವ ಕೊಡುವವನಾಗಿದ್ದು, ಅವರ ಜೋತೆಗೆ ಕೆಲಸವನ್ನು ಮಾಡಿರುವೆ ಎಂದು ಲಿಂಬೀಕಾಯಿ ಹೇಳಿದರು.
ನಾವು ಚುನಾವಣೆಯಲ್ಲಿ ಗೆದ್ದ ನಂತರ ವಿದ್ಯಾವರ್ಧಕ ಸಂಘವನ್ನು ಯಾವ ರೀತಿ ಅಭಿವೃದ್ಧಿ ಪಡಿಸುತ್ತೇವೆ ಎನ್ನುವುದು, ಸಂಘದ ಸದಸ್ಯರ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಜೋತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದಸ್ಯತ್ವ
ಅಭಿಯಾನವನ್ನು ಮಾಡಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಕೇವಲ, ಧಾರವಾಡ ವಿದ್ಯಾವರ್ಧಕ ಸಂಘವಾಗಿ ಆಗದೇ, ಅಖಂಡ ಕರ್ನಾಟಕದ ವಿದ್ಯಾವರ್ಧಕ ಸಂಘವಾಗುವಂತೆ ನೋಡಿಕೊಳ್ಳುತ್ತೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಪ್ರಕಾಶ ಉಡಿಕೇರಿ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇದೆ. ವಿದ್ಯಾವರ್ಧಕ ಸಂಘದಲ್ಲಿ ಹಂಚಿಕೆಯಾಗಿರುವ ಮಳಿಗೆಗಳ ಕುರಿತು ಈ ಬಗ್ಗೆ
ಸದಸ್ಯರಿಂದಲೇ ದೂರನ್ನು ಕೊಡಲಾಗಿದೆ. ಇದರಲ್ಲಿ ತಾರತಮ್ಯ ಆಗಿದ್ದು ನಿಜ. ವಿದ್ಯಾವರ್ಧಕ ಸಂಘ ಪಾರಂಪರಿಕ ಕಟ್ಟಡವಾಗಿದ್ದು, ಅದರ ಪಕ್ಕದಲ್ಲಿ ತಗಡಿನ ಡಬ್ಬಿ ಹಾಕಿದ್ದು, ಪದಾಧಿಕಾರಿಗಳ ಬೆಂಬಲಿಗನಾಗಿರುವ ಕರೆಯಪ್ಪ ಸುಣಗಾರ ಅವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಟೆಂಡರ್ ಆಗಿದೆಯೇ ಎಂದು ಪ್ರಶ್ನಿಸಿದರು.
74 ಕಡೆಗಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾಡಲಿಕ್ಕೆ, ಕಾರ್ಯಾಗಾರ ಮಾಡಿದ್ದೇವೆ ಎಂದಿದ್ದಾರೆ. ಆದರೆ ತಮ್ಮ ಕಾರ್ಯಾಗಾರದಲ್ಲಿ ಬಂದವರಿಗೆ ಖಾಸಗಿ ಸಂಸ್ಥೆಯ ಟ್ಯೂಶನಗಾಗಿ ಕಡ್ಡಾಯವಾಗಿ ಬರಬೇಕೆಂದು ಹೇಳಲಾಗಿದೆ ಇದಕ್ಕೆ ಉತ್ತರ ಕೊಡಬೇಕು. ವಿದ್ಯಾವರ್ಧಕ ಸಂಘಕ್ಕೆ ನಿಯತಕಾಲಿಕವಾಗಿ , ತನ್ನಿಂದಲೇ ತಾನೆ ಬರುವ ಅನುದಾನ 60 ಲಕ್ಷ ಹಾಗೂ ನಾನು ಈ ಹಿಂದೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ, ನನ್ನ ವೈಯಕ್ತಿಕ ಪ್ರಯತ್ನದಿಂದ 5 ಲಕ್ಷ ಅನುದಾನ ನಾನು ತಂದು ಕೊಡಿಸಿರುವುದು ನಾನು ಮಾಡಿರುವ ಪ್ರಾಮಾಣಿಕ ಕೆಲಸವಾಗಿದೆ.
ಮೃತ್ಯುಂಜಯ ಅಪ್ಪಗಳ ಸಂಶೋದನಾ ಕೇಂದ್ರ ಸ್ಥಾಪಲು ಪ್ರಾಮಾಣಿಕ ಪ್ರಯತ್ನವನ್ನು ಡಾ.ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಧೂಳು ಹಿಡಿದಿದೆ. ಪಾಪು ಅಭಿಮಾನಿ ಬಳಗದವರು ಆಯ್ಕೆ ಆದರೆ, ನಮ್ಮ ಬದ್ಧತೆ ಪ್ರಕಾರ ಅದಕ್ಕಾಗಿ ನಾವು 1 ಕೋಟಿ ಅನುದಾನವನ್ನು ತರಲು ಪ್ರಯತ್ನ ಮಾಡುತ್ತೇವೆ.
ನಾವೆಲ್ಲಾ ಪ್ರಚಾರಕ್ಕಾಗಿ ಹೋದಾಗ, ಸಾಹಿತಿಗಳು, ಕಲಾವಿದರು ಅತ್ಯಂತ ನೋವಿನಿಂದ ನಮ್ಮ ಬಳಿ ಮಾತನಾಡುತ್ತಿದ್ದಾರೆ. ಬಾಡಿಗೆದಾರರಿಗೂ ಬಹಳಷ್ಟು ನೋವಿದೆ. ಬಾಡಿಗೆ ಹಣವನ್ನು ಕಡಿಮೆ ಮಾಡುತ್ತೇವೆ. ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾ ಮಂಟಪವನ್ನು ಮಾಡುತ್ತೇವೆ. ಹಾಗೂ ವಿಜ್ಞಾನ ಮಂಟಪವನ್ನು ವಿಜ್ಞಾನ ಹಾಗೂ ಕೃಷಿ ಮಂಟಪವನ್ನು ಮಾಡುತ್ತೇವೆ ಎಂದರು.
ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಹಣದ ಆಮೀಶ ಒಡ್ಡುವ ಮಾತೇ ಇಲ್ಲಾ. ಒಂದು ವೇಳೆ ಹಾಗೆನಾದ್ರೂ ವಿರೋಧಿ ಬಣದವರು ಆರೋಪ ಮಾಡಿದರೆ, ಅದು ವಿದ್ಯಾವರ್ಧಕ ಸಂಘದ ಸಮಸ್ತ ಮತದಾರ ಬಾಂಧವರಿಗೆ
ಮಾಡುವ ಘೋರ ಅಪಮಾನ ಎಂದರು.
ಇದೇ ಸಂದರ್ಭದಲ್ಲಿ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಸಮಗ್ರ ಮಾಹಿತಿ ಇರುವ ಪ್ಯಾಂಪಲೇಟಗಳನ್ನು ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಪಾಪು ಅಭಿಮಾನಿ ಬಳಗದ ಎಲ್ಲಾ 15 ಅಭ್ಯರ್ಥಿಗಳು ಉಪಸ್ಥಿತರಿದ್ದರು.