ರಾಜಕಾರಣಿಳಿಗೆ ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಗೊತ್ತಿಲ್ಲ: ವಿಜಯ ಕುಲಕರ್ಣಿ

Ravi Talawar
ರಾಜಕಾರಣಿಳಿಗೆ ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಗೊತ್ತಿಲ್ಲ: ವಿಜಯ ಕುಲಕರ್ಣಿ
WhatsApp Group Join Now
Telegram Group Join Now

ಮುನವಳ್ಳಿ,ಏಪ್ರಿಲ್ 17:ಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಜೋತೆ ಕಳಸಾ ಬಂಡೂರಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ ಮೊದಲು ಮಹಾದಾಯಿ ಎಂದರೇನು ಕಳಸಾ ಬಂಡೂರಿ ಯೋಜನೆ ಎಂದರೇನು ಎಂಬುದೇ ನಮ್ಮ ರಾಜಕಾರಣಿಳಿಗೆ ಗೊತ್ತಿಲ್ಲ ಸುಮ್ಮನೆ ಭರವಸೆ ನೀಡುತ್ತಾರೆ ಇದು ನಿಲ್ಲಬೇಕು ಇದರ ವಿರುದ್ದ ನಾವು ಚುನಾವಣೆಯಲ್ಲಿ ನೋಟಾ ಬಟನ್ ಒತ್ತುವ ಮೂಲಕ ಪ್ರತಿಭಟಿಸುತ್ತಾ ಬಂದಿದ್ದೇವೆ ಇನ್ನು ಮುಂದೆ ನಡೆಯುವ ಚುನಾವಣೆಯಲ್ಲಿ ನೋಟಾ ಬಟನ್ ಬದಲು ಬಾರುಕೋಲು ಚಿತ್ರವನ್ನು ಮತಯಂತ್ರದಲ್ಲಿ ಆಳವಡಿಸಬೇಕು ಬಾರಕೋಲು ಯಾವುದೇ ಜಾತಿ, ಮತ ಜನಾಂಗಕ್ಕೆ ಸೇರಿದ್ದಲ್ಲ ತಪ್ಪು ಮಾಡಿದವರಿಗೆ ಬಾರುಕೋಲಿನಿಂದ ಚಾಟಿ ಬೀಸುವುದು ವಾಡಿಕೆ ಹಾಗಯೆ ನಮಗೆ ಬೇಡವಾದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ದಿಸಿದ್ದರೆ ಅವರಿಗೆ ಬಾರುಕೋಲು ಬಟನ್ ಒತ್ತುವ ಮೂಲಕ ಚಾಟಿ ಬೀಸುತ್ತೇವೆ ಚುನಾವಣಾ ಆಯೋಗವು ಬಾರುಕೋಲು ಚಿತ್ರವನ್ನು ಮತಯಂತ್ರದಲ್ಲಿ ಆಳವಡಿಸಬೇಕೆಂದು ಒತ್ತಾಯಿಸುತ್ತೇವೆ ಈಗಾಗಲೇ ಈ ಕುರಿತು ಮನವಿ ಸಲ್ಲಿಸಲಾಗಿದೆ. ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ಮಹಾದಾಯಿ ಕಳಸಾ ಬಂಡೂರಿ ಯೋಜನೆಗಳು ನೆನಪಾಗುತ್ತವೆ ಚುಣಾವಣೆ ಮುಗಿದ ನಂತರ ಆ ವಿಷಯದ ಕುರಿತು ಚಕಾರ ಎತ್ತುವುದಿಲ್ಲ ಚುನಾವಣೆಗೆ ನಿಂತವರು ಮಹಾದಾಯಿ ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಸಭೆ ಸಮಾರಂಭಗಳಲ್ಲಿಹಾಗೂ ಚುನಾವಣೆ ಪ್ರಚಾರದಲ್ಲಿ ಹೇಳುತ್ತಿರುವುದು ನಿಲ್ಲಬೇಕು ಮೂಗಿಗೆ ತುಪ್ಪ ಒರೆಸುವ ಕೆಲಸ ಬಹಳ ವರ್ಷಗಳಿಂದ ಆಗುತ್ತಿದೆ ಈ ಅನ್ಯಾಯ ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ೨೪ ವರ್ಷಗಳಾದರೂ ಕಳಸಾ ಬಂಡೂರಿ ಮಲಪ್ರಭಾ ತಿರುವು ಯೋಜನೆ ಅನುಷ್ಠಾನವಾಗಿಲ್ಲ ೨೦೦೬ ರಲ್ಲಿ ಗುದ್ದಲಿ ಪೂಜೆ ಮಾಡಿ ೨೦೧೮ ನ್ಯಾಯಾಧಿಕರಣತೀರ್ಪು, ಕೇಂದ್ರದ ಕ್ಲಿಯರೆನ್ಸ್ ಗೆಜೆಟ್ ನೋಟಿಫಿಕೇಶನ್ ಹೊಸ ಡಿ.ಪಿ.ಆರ್ ಎಲ್ಲವೂ ಆಗಿದ್ದರೂ ಇನ್ನೂ ಯೋಜನೆ ಪೂರ್ಣಗೊಳ್ಳದಿರುವುದು ವಿಶಾದದ ಸಂಗತಿಯಾಗಿದೆ ಭೀಕರ ಬರಗಾಲದ ಈ ಸಂದರ್ಭದಲ್ಲಿ ಬೆಳೆ ಸರಿಯಾಗಿ ಬಂದಿಲ್ಲ ಅಂತರ್ಜಲ ಮಟ್ಟ ಕುಸಿದಿದೆ ಈಗ ಕಳಸಾ ಬಂಡೂರಿ ನದಿ ತಿರುವು ಯೋಜನೆ ಕಾಮಗಾರಿ ಪ್ರಾರಂಭಿಸಿ ರೈತರಿಗೆ ಆಸರೆಯಾಗಬೇಕು ಎಂದು ತಿಳಿಸಿದರು.
ಮಹಾದಾಯಿ ಮಲಪ್ರಭಾ ನದಿ ಜೊಡಣಾ ಹೋರಾಟ ಸಮಿತಿ ಸದಸ್ಯರಾದ ರವಿ ಹುರಳಿ, ಕಲ್ಲನಗೌಡ ಬಿಕ್ಕನಗೌಡ್ರ, ಫಿರೋಜ ಬಿಜಲಿಖಾನ, ಮಂಜುನಾಥ ಮೇಟಿ ಇತರರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article