ಬಿಜೆಪಿ ವಕ್ಫ್ ವಿಚಾರವಾಗಿ ರಾಜಕಾರಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ

Ravi Talawar
ಬಿಜೆಪಿ ವಕ್ಫ್ ವಿಚಾರವಾಗಿ ರಾಜಕಾರಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ
WhatsApp Group Join Now
Telegram Group Join Now

ಬೆಂಗಳೂರು: “ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ವಕ್ಫ್ ನೋಟಿಸ್ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, “ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅದು ಪ್ರತಿಭಟನೆ ಅಲ್ಲ” ಎಂದು ಕಿಡಿಕಾರಿದರು.

ಚನ್ನಪಟ್ಟಣ ಉಪಸಮರ ವಿಚಾರವಾಗಿ ಪ್ರತಿಕ್ರಿಯಿಸಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ಏನು ಕೊಡುತ್ತಾನೆ. ಯಾವ ರೀತಿ ಸಹಾಯ ಮಾಡುತ್ತಾನೆ. ಅವರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತಾನೆ. ಅದು ಬಹಳ ಮುಖ್ಯ” ಎಂದರು.

WhatsApp Group Join Now
Telegram Group Join Now
Share This Article