ಬಳ್ಳಾರಿ. ನ. 19.: ನಗರದ ಮೋತಿ ಸರ್ಕಲ್ ನಲ್ಲಿ ಇರುವ ಬುಡಕಾಂಪ್ಲೆಕ್ಸ್ ಇಂದೇ ಇನ್ನು ಮುಂಜಾನೆ ಅನಾಮದೇಯ ಶವ ಒಂದು ಪತ್ತೆಯಾಗಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಿಮ್ಸ್ ಶವಗಾರಕ್ಕೆ ರವಾನಿಸಿದ್ದಾರೆ.
ಇಂದು ಮುಂಜಾನೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ಅಧ್ಯಕ್ಷರು ಶವದ ಮತ್ತು ಸ್ಥಳದ ಪಂಚನಾಮಿಯನ್ನು ನಡೆಸಿ ಮಧ್ಯಪಾನ ಮಾಡಿದ ಮತ್ತಿನಲ್ಲಿ ಕೆಲವರು ಈ ವ್ಯಕ್ತಿಯನ್ನು ಹತ್ಯೆ ಮಾಡಿರುವ ಶಂಕೆ ಇದೆ ಕೂಲಂಕುಶ ಪೊಲೀಸ್ ಕೊಲೆಗಾರರನ್ನು ಪತ್ತೆ ಹಚ್ಚ ಲಾಗುವುದು ಇದಕ್ಕಾಗಿ ಹಿರಿಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ಕೊಲೆಯ ರಹಸ್ಯವನ್ನು ವಿಘ್ರದಲ್ಲೇ ಭೇದಿಸಲಾಗುವುದು ಎಂದರು. ಇಂದು ಮುಂಜಾನೆ 11ಗಂಟೆ ಸಮಯದಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ವಿಧಿ ವಿಜ್ಞಾನ ಅಧಿಕಾರಿಗಳ ಸ್ಥಳ ಮಹಾಜರು ಮತ್ತು ಕೊಲೆಯಾದ ವ್ಯಕ್ತಿಯ ಇತರೆ ಗುರುತುಗಳ ಪತ್ತೆ ಕಾರ್ಯದಲ್ಲಿ ನೆರವಾಗುವಂಥ ಸಾಕ್ಷರಗಳನ್ನು ಸಂಗ್ರಹಿಸಿಕೊಂಡು ಹೋದರು.


