ಬೆಂಗಳೂರು: ಸಹಕಾರ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮತ್ತು ಅವರ ಪುತ್ರ ಎಂ.ಎಲ್.ಸಿ. ರಾಜೇಂದ್ರ ಅವರ ಮೇಲಿನ ‘ಸುಪಾರಿ’ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್, ಕಾಣದ ಪ್ರಭಾವಿ ವ್ಯಕ್ತಿಗಳು ಮತ್ತು “ಉನ್ನತ ಮಟ್ಟದ ರಾಜಕಾರಣಿಗಳು” ತಂದೆ-ಮಗನ ವಿರುದ್ಧ ಹೊಂದಿರುವ ವೈಯಕ್ತಿಕ ದ್ವೇಷ ಸೇರಿದಂತೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲು ಮುಂದಾಗಿದ್ದಾರೆ.
ರಾಜೇಂದ್ರ ಪ್ರಬಲ ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸದೆ, ದೂರು ನೀಡಿದ್ದಾರೆ. ಈ ರಹಸ್ಯವನ್ನು ಭೇದಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ರಾಜಕೀಯ ಸಂಪರ್ಕಗಳಿಂದಾಗಿ ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ. ಪ್ರಕರಣದ ತನಿಖೆ ನಡೆಸುವ ಪೊಲೀಸರು ಸೂಕ್ಷ್ಮತೆಯಿಂದ ಎದುರಿಸಬೇಕಾಗಿದೆ.
ಹಿಂದೆ ಯಾವುದೋ ಸಂದರ್ಭದಲ್ಲಿ ನಡೆದ ಘಟನೆಗಳು, ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳುವುದರೊಂದಿಗೆ ಬಯಲಾಗಿದೆ. ಪ್ರಭಾವಿ ರಾಜಕಾರಣಿಗಳು ಅವುಗಳ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಈ ಎರಡು ಪ್ರಕರಣಗಳ ನಡುವೆ ಪರಸ್ಪರ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಜಣ್ಣ ದೂರು ನೀಡಲು ತಮ್ಮದೇ ಆದ ಸಮಯ ತೆಗೆದುಕೊಂಡರು, ಮತ್ತು ಅಂತಿಮವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ರಾಜಣ್ಣ ಚರ್ಚಿಸಿದರು ನಂತರ ಸಿಐಡಿ ತನಿಖೆಗೆ ಪ್ರಕರಣವನ್ನು ವಹಿಸಲಾಗಿದೆ.