ಬೈಲಹೊಂಗಲ. ಭಾರಿ ಕುತೂಹಲ ಕೆರಳಿಸಿರುವ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಬಿಜೆಪಿ ಸದಸ್ಯ ನಾಗರಾಜ ಅಪಹರಣಕ್ಕೆ ಒಳಗಾಗಿದ್ದ ಬಿಜೆಪಿ ಚನ್ನಮ್ಮನ ಕಿತ್ತೂರ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೊರ್ಟ್ನಲ್ಲಿ ಪೊಲಿಸರು ಹಾಜರ ಪಡಿಸಲು ಕರೆತಂದಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿಕೊಂಡು ಅಪಹರಣ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಬೆಳಗಾವಿ ಮತ್ತು ಕಿತ್ತೂರಿನಲ್ಲಿ ಉಗ್ರ ಪ್ರತಿಭಟನೆ ನಡೆಸಿದ್ದು ಈಗ ಬೈಲಹೊಂಗಲ ಕೋರ್ಟ್ ಗೆ ಪೊಲೀಸರು ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಿರುವದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ತೀವ್ರ ಕುತೂಹಲ ಮೂಡಿಸಿದೆ.
ಬೈಲಹೊಂಗಲ ಪಟ್ಟಣದ ಕೋರ್ಟ್ ಆವರಣದಲ್ಲಿ ಕುತೂಹಲ ಮೂಡಿಸುವ ಕಳೆದ 5 ದಿನಗಳ ನಂತರ ಕೋರ್ಟ್ ಗೆ ಬಂದು ನ್ಯಾಯಧೀಶರ ಮುಂದೆ ಏನು ಹೇಳಿಕೆ ಕೊಡತಾರೋ? ಯಾರ ವಿರುದ್ಧ ಅಪಹರಣದ ಆರೋಪ ಮಾಡತಾರೋ? ಕಾದು ನೋಡಬೇಕು. ಈಗ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ವಕೀಲರಾಗಿ ಸಮವಸ್ತ್ರದೊಂದಿಗೆ ಕೋರ್ಟ್ ಗೆ ಆಗಮಿಸಿ ವಕಾಲತ್ತು ವಾದಿಸಲಿದ್ದಾರೆ.