ಸ್ನೇಹಕೂಟದಿಂದ ಕವಿ ನಾಗೇಶ್ ನಾಯಕಗೆ ಸನ್ಮಾನ

Hasiru Kranti
ಸ್ನೇಹಕೂಟದಿಂದ ಕವಿ ನಾಗೇಶ್ ನಾಯಕಗೆ ಸನ್ಮಾನ
WhatsApp Group Join Now
Telegram Group Join Now

ಸವದತ್ತಿ: ಪಟ್ಟಣದ ಶಿವಬಸವ ನಗರದ ಶಿಕ್ಷಕ, ಕವಿ ಹಾಗೂ ವಿಮರ್ಶಕರಾದ ನಾಗೇಶ್ ಜೆ. ನಾಯಕ ಅವರನ್ನು ಸ್ನೇಹಕೂಟ ಬಳಗದಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ಯಾದಗಿರಿಯ ವೆಂಕೋಬ ಗ್ರಾಮೀಣ ಟ್ರಸ್ಟ್ ವತಿಯಿಂದ ’ಅಪ್ಪ’ ಪ್ರಶಸ್ತಿ ಹಾಗೂ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ’ಸಿರಿಗನ್ನಡ ಪುಸ್ತಕ ಪ್ರಶಸ್ತಿ’ಗೆ ಭಾಜನರಾದ ಕಾರಣ ಸ್ನೇಹಕೂಟ ಬಳಗವು, ಅವ್ವ ಸ್ವಗೃಹದಲ್ಲಿ ನಾಗೇಶ್ ನಾಯಕ ಅವರನ್ನು ಗೌರವಿಸಿ ಸನ್ಮಾನಿಸಿತು.

ಗೆಳೆಯರ ಬಳಗದ ಝಕೀರ್‌ಸಾಬ್ ನದಾಫ್ ಮಾತನಾಡಿ, ನಾಗೇಶ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು, ಸವದತ್ತಿ ಪಟ್ಟಣವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅವರ ನಿರಂತರ ಬರವಣಿಗೆಗೆ ಮತ್ತಷ್ಟು ಪ್ರಶಸ್ತಿಗಳು ಒಲಿದು ಬರಲಿ ಎಂಬುದಾಗಿ ಸ್ನೇಹಕೂಟ ಹಾರೈಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರಕಾಶ್ ಸುತಗಟ್ಟಿ, ಈರಯ್ಯ ಹಿರೇಮಠ, ಮಹಮ್ಮದ್ ದೊಡವಾಡ, ಮಹಬೂಬ್ ಯಡೊಳ್ಳಿ, ಧರ್ಮೇಂದ್ರ ಪಂಢರಿ, ಶಂಕರ, ವೈದ್ಯ ಅವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article