ಎಕ್ ಪೇಡ್ ಮಾ ಕೆ ನಾಮ ಅಭಿಯಾನದಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮ 

Ravi Talawar
ಎಕ್ ಪೇಡ್ ಮಾ ಕೆ ನಾಮ ಅಭಿಯಾನದಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮ 
WhatsApp Group Join Now
Telegram Group Join Now
ಬೆಳಗಾವಿ: ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಲಿಂಗಾಯತ ಮಹಿಳಾ ಸಮಾಜ, ಬೆಳಗಾವಿ ಇವರ ಸಹಯೋಗದಲ್ಲಿ ಕೇಂದ್ರದ ಆವರಣದಲ್ಲಿ ದಿನಾಂಕ ೧೮.೦೯.೨೦೨೫ ರಂದು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಎಕ್ ಪೇಡ್ ಮಾ ಕೆ ನಾಮ ಅಭಿಯಾನದಡಿಯಲ್ಲಿ  ಪರಿಸರ ಸಂರಕ್ಷಣೆಯ ಉದ್ಧೇಶವಾಗಿ  ಮತ್ತು ನೆಚ್ಚಿನ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದ ಅಂಗವಾಗಿ ಲಿಂಗಾಯತ ಸಮಾಜದ ಎಲ್ಲ ಪದಾಧಿಕಾರಿಗಳು ತಮ್ಮ ತಾಯಿಯರನ್ನು ಮನಸ್ಸಿನಲ್ಲಿ ನೆನೆಯುತ್ತಾ ಮತ್ತು ೩೩ ಸ್ವಾತಂತ್ರ ಹೋರಾಟ ಮಾಡಿದ ಮಹಿಳೆಯರ ಹಾಗೂ ಶರಣೆಯರ ಹೆಸರಿನಲ್ಲಿ ಗಿಡಗಳನ್ನು ನೈಸರ್ಗಿಕ ಕೃಷಿ ತಾಕುಗಳಲ್ಲಿ ನೆಡುವುದರ ಮೂಲಕ ೧೦೦ ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಕ್ಷಿಯಾದರು.
ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶ್ರೀಮತಿ ಮುಕ್ತಾಂಬಾ ಬಿ., ಮಹಿಳಾ ಸಮಾಜ, ಬೆಳಗಾವಿ ಅಧ್ಯಕ್ಷೆ ಶ್ರೀಮತಿ ಮಧುಮತಿ ಹಿರೇಮಠ, ಶ್ರೀಮತಿ ರತ್ನಾ ಬೆಲ್ಲದ, ಶ್ರೀಮತಿ ಶೈಲಜಾ ಬಿಂಗೆ ಇವರು ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು. ನಂತರ ಶ್ರೀಮತಿ ಮಧುಮತಿ ಹಿರೇಮಠ ಮಾತನಾಡುತ್ತಾ, ಅರಣ್ಯ ನಾಶದಿಂದ ಪರಿಸರ ನಾಶವಾಗುತ್ತಿದೆ, ಈ ಹಿನ್ನಲೆಯಲ್ಲಿ ಪ್ರಕೃತಿ ವಿಕೋಪಗಳು ನಡೆಯುತ್ತಿವೆ.  ಆದ್ದರಿಂದ ಅರಣ್ಯ ಸಸಿಗಳನ್ನು ನೆಟ್ಟು ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಕ್ರಮಗಳನ್ನು ತೀವ್ರವಾಗಿ ಅಳವಡಿಸಿಕೊಳ್ಳುವುದು ಅತಿ ಅವಶ್ಯವಾಗಿದೆ ಎಂದರು.
ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾವೈಖರಿ ಗಮನಿಸಿ ಲಿಂಗಾಯತ ಮಹಿಳಾ ಪದಾಧಿಕಾರಿಗಳು ಕೃಷಿ ವಿಜ್ಞಾನ ಕೇಂದ್ರದ ಎಲ್ಲ ವಿಜ್ಞಾನಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶ್ರೀಮತಿ ಮುಕ್ತಾಂಬಾ ಬಿ. ಇವರು ಕೃಷಿ ಮಹಿಳೆಯರಿಗಾಗಿ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ದೇಶದಲ್ಲಿ ಅರಣ್ಯ ನಾಶದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.  ಒಂದು ಉತ್ತಮವಾಗಿ ಬೆಳೆದ ಗಿಡವು ಪ್ರತಿ ವರ್ಷ ೩೧ ಕಿ.ಗ್ರಾಂ. ನಷ್ಟು ಹವೆಯಲ್ಲಿರುವ ಇಂಗಾಲದ ಡೈಆಕ್ಸೈಡ್‌ನ್ನು ಹೀರಿಕೊಂಡು ಪರಿಸರವನ್ನು ಶುದ್ಧಿಗೊಳಿಸುತ್ತದೆ.  ಆರೋಗ್ಯಯುತ ಪರಿಸರ ನಿರ್ಮಾಣಕ್ಕೆ ದೇಶದಲ್ಲಿ ಪ್ರತಿಶತ ೩೩ ರಷ್ಟು ಅರಣ್ಯ ಕ್ಷೇತ್ರ ಬೇಕಾಗಿದ್ದು, ಈಗ ಪ್ರತಿಶತ ೨೪ ಮಾತ್ರ ಇರುವುದು.   ಈ ಹಿನ್ನಲೆಯಲ್ಲಿ ದೇಶಾದ್ಯಂತ ಗಿಡ ನೆಡುವ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಜಮೀನಿನ ಬದುಗಳಲ್ಲಿ ಮತ್ತು ಮನೆಯ ಪರಿಸರದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಗಿಡ ನೆಡುವ ಆಂದೋಲನಕ್ಕೆ ಸಹಯೋಗ ನೀಡಬೇಕೆಂದು ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳು, ನೈಸರ್ಗಿಕ ಕೃಷಿಯ ಮಹತ್ವ, ಸಾವಯವ ಕೃಷಿ ಪದ್ಧತಿ ಮತ್ತು ಕೇಂದ್ರದಲ್ಲಿರುವ ಪ್ರಾತ್ಯಕ್ಷಿಕೆ ಘಟಕಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾಜ, ಬೆಳಗಾವಿಯ ಕಾರ್ಯದರ್ಶಿ ಶ್ರೀಮತಿ ರಕ್ಷಾ ದೇಗಿನಾಳ ಹಾಗೂ ಸಹ ಕಾರ್ಯದರ್ಶಿ ಶ್ರೀಮತಿ ಸರೋಜಾ ನಿಶಾನ್ದಾರ, ಶ್ರೀಮತಿ ರಾಜೇಶ್ವರಿ ಕವಟಗಿಮಠ, ಶ್ರೀಮತಿ ಸಂಬರಗಿಮಠ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article