ಘಟಪ್ರಭಾ: ಕರ್ನಾಟಕ ಸರ್ಕಾರದ ಪೋಲೀಸ್ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವದಕ್ಕಾಗಿ ಮುಖ್ಯಮಂತ್ರಿಗಳಿಂದ ಬಂಗಾರದ ಪದಕ ಪಡೆದಿರುವ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರರು ಮತ್ತು ಘಟಪ್ರಭಾ ಪೋಲೀಸ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಆಗಿರುವ ಹಸನಸಾಬ ಮುಲ್ಲಾ ಅವರನ್ನು ಕನ್ನಡ ಸೇನೆ, ಕರ್ನಾಟಕ ಸಂಘಟನೆಯ ಗೋಕಾಕ ತಾಲೂಕು ಘಟಕದ ವತಿಯಿಂದ ಇಂದು ಬುಧವಾರ ದಿನಾಂಕ 09-04-2025 ರಂದು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಶಾಲು ಹೊದಿಸಿ ಫಲ ಪುಷ್ಪ ಗಳೊಂದಿಗೆ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಸಂಘಟನೆಯ ಗೋಕಾಕ ತಾಲೂಕು ಅಧ್ಯಕ್ಷ ಅಪ್ಪಾಸಾಬ ಮುಲ್ಲಾ,, ಉಪಾಧ್ಯಕ್ಷ ಶ್ರೀಕಾಂತ ವಿ ಮಹಾಜನ, ಸದಸ್ಯರಾದ ರಿಯಾಜ್ ಬಾಡಕರ, ಮುರ್ತುಜಾ ಮಕಾನದಾರ, ಮುಂತಾದವರು ಇದ್ದರು.