ಕಳ್ಳನತ ಬಳಿಯೇ ಕಳ್ಳತನ; ಚಿನ್ನದ ಪದಕ ಗೆದ್ದ ಪಿಐ ವಿರುದ್ಧ ಚಿನ್ನ ಕದ್ದ ಆರೋಪ

Ravi Talawar
ಕಳ್ಳನತ ಬಳಿಯೇ ಕಳ್ಳತನ; ಚಿನ್ನದ ಪದಕ ಗೆದ್ದ ಪಿಐ ವಿರುದ್ಧ ಚಿನ್ನ ಕದ್ದ ಆರೋಪ
WhatsApp Group Join Now
Telegram Group Join Now

ಮಂಗಳೂರು, (ಏಪ್ರಿಲ್ 05): ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರುದ್ಧ ಆರೋಪಿಯ ಮೈಮೇಲಿದ್ದ 50 ಗ್ರಾಮ್‌ ಚಿನ್ನ ಎಗರಿಸಿದ ಆರೋಪ ಬಂದಿದೆ. ಮಂಗಳೂರು ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ನಾಯಕ್‌ ಅವರು ಪ್ರಕರಣವೊಂದನ್ನು ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಲಂಚದ ಜೊತೆ ಆರೋಪಿಯ ಮೈಮೇಲಿದ್ದ 50 ಗ್ರಾಮ್​ ಚಿನ್ನವನ್ನು ಗುಳಂ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉಳ್ಳಾಲ ಕೋಟೆಕಾರ್‌ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣ ಭೇದಿಸಿದ ಪೊಲೀಸರ ತಂಡದಲ್ಲಿದ್ದ ಬಾಲಕೃಷ್ಣ ಅವರಿಗೆ ಸಿಎಂ ಚಿನ್ನದ ಪದಕ ಲಭಿಸಿದೆ. ಇದೇ ಸಂದರ್ಭದಲ್ಲೇ ಬಾಲಕೃಷ್ಣ ಲಂಚ ಹಾಗೂ 50 ಗ್ರಾಮ್ ಚಿನ್ನ ಎಗರಿಸಿದ್ದಾರೆ ಎಂದು ಎಸಿಪಿಗೆ ದೂರು ನೀಡಿದ ವಿಚಾರ ಬಯಲಿಗೆ ಬಂದಿದೆ.

2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ತನ್ನ ಮನೆಯಿಂದ 15 ಲಕ್ಷ ರೂ. ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ವಯಸ್ಕ ಗೆಳೆಯರನ್ನು ಬಂಧಿಸಿದ್ದರು. ಕಳವಾದ ಚಿನ್ನಾಭರಣವನ್ನು ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದು, ಇದನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.‌

WhatsApp Group Join Now
Telegram Group Join Now
Share This Article