ಮಕ್ಕಳಿಗೆ ದೈಹಿಕ ಶಿಕ್ಷಣ ಅತ್ಯಂತ ಅವಶ್ಯವಾಗಿದೆ: ಶಿಕ್ಷಕ ಎಮ್ ಆರ್ ಹಲಸಂಗಿ

Pratibha Boi
ಮಕ್ಕಳಿಗೆ ದೈಹಿಕ ಶಿಕ್ಷಣ ಅತ್ಯಂತ ಅವಶ್ಯವಾಗಿದೆ: ಶಿಕ್ಷಕ ಎಮ್ ಆರ್ ಹಲಸಂಗಿ
WhatsApp Group Join Now
Telegram Group Join Now
ಅಥಣಿ: ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ತೃಪ್ತಿ ನನಗೆ ಇದೆ. ಮಕ್ಕಳನ್ನು ದೈಹಿಕವಾಗಿ ಸದೃಡ ಮಾಡಲು ದೈಹಿಕ ಶಿಕ್ಷಣ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕಳೆದ ೩ ದಶಕಳಿಂದಲೂ ಶಾಲಾ ಮಕ್ಕಳಿಗೆ ಪ್ರಾಮಾಣಿಕವಾಗಿ ದೈಹಿಕ ಶಿಕ್ಷಣವನ್ನು ನೀಡಿ ಸೇವಾ ಸಂತೃಪ್ತಿಯೊAದಿಗೆ ಸೇವೆಯಿಂದ ನಿವೃತ್ತಿ ಹೊಂದುತ್ತಿರುವದು ಸಹಜ ಕ್ರೀಯಾಗಿದ್ದರೂ ನನಗೆ ಎಲ್ಲ ರೀತಿಯಿಂದಲೂ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಎಮ್ ಆರ್ ಹಲಸಂಗಿ ಹೇಳಿದರು
ಪಟ್ಟಣದ  ನೌಕರರ ಭವನದಲ್ಲಿ  ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ದೈಹಿಕ ಶಿಕ್ಷಕರ ವತಿಯಿಂದ ನಿವೃತ್ತ ತಾಲೂಕಾ ದೈಹಿಕ  ಶಿಕ್ಷಣಾಧಿಕಾರಿ ಎಂ ಆರ್ ಹಲಸಂಗಿ ಅವರಿಗೆ ಸೇವಾ ನಿವೃತ್ತಿ ಸಮಾರಂಭದಲ್ಲಿ ಸೇವಾ ಸತ್ಕಾರ ಮಾಡಿದರು. ಈ ವೇಳೆ ಮಾತನಾಡಿದ ಎಮ್ ಆರ್ ಹಲಸಂಗಿ ಅವರು ಪ್ರಾಮಾಣಿಕತೆಯಿಂದ   ಮಾಡಿರುವ ಅವರ ಸೇವೆಯನ್ನು ಗುರುತಿಸಿ  ದೈಹಿಕ ಶಿಕ್ಷಕರ ಬಳಗ ಎರಡು ಚಿನ್ನದ ಉಂಗುರಗಳನ್ನು ಒಡುಗರೆಯಾಗಿ ಗೌರವಿಸಿ ಅಭಿನಂದಿಸಿರುವದು ಸಂತಸ ತಂದಿದೆ. ಅಥಣಿಯಲ್ಲಿ ಹಲವು ವರ್ಷಗಳಿಂದ ಯಾರಿಗೂ ಸಿಗದ ಗೌರವ ಅದ್ದೂರಿ ಅಭಿನಂದನಾ ಸಮಾರಂಭ ಮೊದಲ ಬಾರಿಗೆ ನಡೆದಿರುವುದಂತೂ ಸತ್ಯ ಎಂದು ಹೇಳಲು ತುಂಬಾ ಸಂತೋಷವೆನಿಸುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಾಮನಗೌಡ ಪಾಟೀಲ, ಪ್ರಾಥಮಿಕ ಹಾಗು ಪ್ರೌಡ ಶಾಲೆಯ ಸಂಘಟನೆಗಳ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಹಾಗೂ ಬಿ ಆರ್ ಪಿ,ಸಿ ಆರ್ ಪಿ, ಸಹ ಶಿಕ್ಷಕರು ಸೇರಿದಂತೆ ಹಲವು ಜನ ಮುಖಂಡರು ಗಣ್ಯರು ಮತ್ತು ಎಮ್ ಆರ್ ಹಲಸಂಗಿ ಶಿಕ್ಷರ ಕುಟುಂಬಸ್ಥರು ಹಾಗು ಬಂಧುಗಳು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article