ಮತಗಟ್ಟೆಗಳಲ್ಲಿ ಬ್ರೆತ್ ಅನಲೈಸರ್ ಪರೀಕ್ಷೆ ಕೋರಿಕೆ ಅರ್ಜಿ: ಸುಪ್ರೀಂಕೋರ್ಟ್ ಅರ್ಜಿ ವಜಾ

Ravi Talawar
ಮತಗಟ್ಟೆಗಳಲ್ಲಿ ಬ್ರೆತ್ ಅನಲೈಸರ್ ಪರೀಕ್ಷೆ ಕೋರಿಕೆ ಅರ್ಜಿ: ಸುಪ್ರೀಂಕೋರ್ಟ್ ಅರ್ಜಿ ವಜಾ
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್ 10: : ಲೋಕಸಭೆ ಚುನಾವಣೆ ಮತದಾನದ ವೇಳೆ ಮತಗಟ್ಟೆಯ ಸರತಿ ಸಾಲಿನಲ್ಲಿ ಬ್ರೆತ್ ಅನಲೈಸರ್ ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.

ನ್ಯಾಯಮೂರ್ತಿ ಸಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿ ವಜಾಗೊಳಿಸಿ, ಆಂಧ್ರಪ್ರದೇಶದ ಹೈಕೋರ್ಟ್ ನೀಡಿದ್ದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಅಲ್ಲದೆ, ಪ್ರಚಾರದ ಹಿತಾಸಕ್ತಿಯಿಂದ ಸಲ್ಲಿಸಲಾಗಿರುವ ಅರ್ಜಿ ಇದಾಗಿದೆ ಎಂದು ಹೇಳಿದೆ.

ಏನಿದು? ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯೇ? ಚುನಾವಣೆ ದಿನ ಮದ್ಯ ಮಾರಾಟ ಇರುವುದಿಲ್ಲ. ಎಲ್ಲಾ ಕಡೆ ಪೊಲೀಸರ ನಿಯೋಜನೆ ಇರುತ್ತದೆ. ಇಂತಹ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ ಎಂದು ಪೀಠ ಹೇಳಿದೆ.

ಈ ಸಂಬಂಧ ಜನವಾದಿ ಪಕ್ಷದ ಆಂಧ್ರಪ್ರದೇಶದ ಘಟಕವು ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು.

ಯಾವುದೇ ವ್ಯಕ್ತಿ ಮದ್ಯದಿಂದ ಉತ್ತೇಜನಗೊಂಡು ಮತ ಹಾಕುವುದನ್ನು ತಡೆಯಲು ಮತಗಟ್ಟೆಗಳ ಪ್ರವೇಶ ದ್ವಾರದಲ್ಲಿ ಬ್ರೆತ್ ಅನಾಲೈಸರ್ ಪರೀಕ್ಷೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿದಾರರು ಕೋರಿದ್ದರು.

WhatsApp Group Join Now
Telegram Group Join Now
Share This Article