ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪೆಮಾ ಖಂಡು

Ravi Talawar
ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪೆಮಾ ಖಂಡು
WhatsApp Group Join Now
Telegram Group Join Now

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಚೌನಾ ಮೀನ್ ಅರುಣಾಚಲ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇಬ್ಬರೂ ಬುಧವಾರ ಇಟಾನಗರ ತಲುಪಿದ್ದರು. ಖಂಡು 2016ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಇದಕ್ಕೂ ಮುನ್ನ ಬುಧವಾರ ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಖಂಡು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಖಂಡು ಅವರೊಂದಿಗೆ 11 ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ದಿನ ಮುಂಚಿತವಾಗಿ, ಖಂಡು ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಶ್ಲಾಘಿಸಿದ ಖಂಡು, ಬಿಜೆಪಿಯಲ್ಲಿ ವಿಶ್ವಾಸವಿಟ್ಟು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ತಂದಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದರು.

ಪೆಮಾ ಖಂಡು ಆಗಸ್ಟ್ 21, 1979 ರಂದು ತವಾಂಗ್‌ನಲ್ಲಿ ಜನಿಸಿದರು. ಚೀನಾದ ಗಡಿಯಲ್ಲಿರುವ ತವಾಂಗ್ ಜಿಲ್ಲೆಯ ಗ್ಯಾಂಗ್‌ಖಾರ್ ಗ್ರಾಮದಿಂದ ಬಂದಿರುವ ಪೆಮಾ ಖಂಡು, ಮೊನ್ಪಾ ಬುಡಕಟ್ಟಿನಿಂದ ಬಂದವರು. ಅವರು ತವಾಂಗ್‌ನ ಬೊಂಬಾದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಇದಾದ ನಂತರ 2000ನೇ ಇಸವಿಯಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಉನ್ನತ ಶಿಕ್ಷಣ ಮುಗಿಸಿ ರಾಜಕೀಯಕ್ಕೆ ಕಾಲಿಟ್ಟರು.

ಅವರ ತಂದೆ ದೋರ್ಜಿ ಖಂಡು ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದರು. 2005ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪೇಮಾ ಖಂಡು ರಾಜಕೀಯ ಪ್ರವೇಶಿಸಿದರು. ಆದರೆ, ಅವರ ತಂದೆ ದೋರ್ಜಿ ಖಂಡು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದಾಗ ಅವರ ನಿಜವಾದ ರಾಜಕೀಯ ಪ್ರಯಾಣ ಪ್ರಾರಂಭವಾಯಿತು.

ದೋರ್ಜಿ ಖಂಡು ಅವರು 2007 ರಿಂದ 2011 ರವರೆಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಇದಾದ ನಂತರ, 2011 ರಲ್ಲಿ, ಪೆಮಾ ಖಂಡು ತನ್ನ ಸ್ವಂತ ತಂದೆಯ ವಿಧಾನಸಭಾ ಕ್ಷೇತ್ರ ಮುಕ್ತೋದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇದಾದ ನಂತರ ಪೆಮಾ ಖಂಡು ಅವರನ್ನು ಅರುಣಾಚಲ ಪ್ರದೇಶ ಸಚಿವ ಸಂಪುಟಕ್ಕೆ ಸೇರಿಸಲಾಯಿತು. 2014 ರಲ್ಲಿ, ಮಾಜಿ ಮುಖ್ಯಮಂತ್ರಿ ನಬಮ್ ತುಕಿ ನೇತೃತ್ವದ ಸರ್ಕಾರದಲ್ಲಿ ಪೆಮಾ ಖಂಡು ನಗರಾಭಿವೃದ್ಧಿ ಸಚಿವರಾಗಿ ನೇಮಕಗೊಂಡರು. ಇದಾದ ನಂತರ ಅವರ ರಾಜಕೀಯ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿತ್ತು.

WhatsApp Group Join Now
Telegram Group Join Now
Share This Article