ಇಂಡಿ: ಮನುಷ್ಯ ಬೇಕಾದಷ್ಟು ಹಣ ಆಸ್ತಿ ಅಂತಸ್ಥು ಸಂಪತ್ತು ಗಳಿಸಬಹುದು ಆದರೆ ನೆಮ್ಮದಿ ಮಾತ್ರ ಸಿಗದು ಮನುಷ್ಯನಿಗೆ ಶಾಂತಿ ನೆಮ್ಮದಿ ದೊರೆಯಬೇಕಾದರೆ ಒಳ್ಳೆಯ ಸಂಸ್ಕಾರದಿಂದ ಮಾತ್ರ ಸಿಗುತ್ತದೆ. ಇಂದು ವಿಶ್ವಭಾರತಿ ಶಾಲೆಯಲ್ಲಿ ಮಕ್ಕಳಿಂದ ತಂದೆ-ತಾಯಂದಿರರಿಗೆ, ಗುರಗಳಿಗೆ ಪಾದ ಪೂಜೆ ಮಾಡಿಸುವ ಮೂಲಕ ಒಳ್ಳೆಯ ಸಂಸ್ಕಾರ ಮಕ್ಕಳಲ್ಲಿ ಬೆಳೆಸುತ್ತಿರುವ ಉತ್ತಮ ಕಾರ್ಯವಾಗಿದೆ ಎಂದು ಖೇಡಗಿ ವಿರಕ್ತ ಮಠದ ಪೂಜ್ಯ ಶ್ರೀ ಶಿವಬಸವರಾಜೇಂದ್ರ ಮಹಾಸ್ವಾಮಿಜಿಗಳು ಹೇಳಿದರು.
ಅವರು ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಡ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಮಾತಾ-ಪಿತೃ ವಂದನಾ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಮಕ್ಕಳು ತಂದೆ ತಾಯಿಗಳಿಗೆ ಪಾದ ಪೂಜೆ ಮಾಡುತ್ತಿರುವಾಗ ಸಿಗುತ್ತಿರುವ ಆನಂದ ಹೇಳತಿರದು. ಅವರ ಮನಸ್ಸಿಗೆ ಆನಂದ ಉಂಟಾಗಿ ತನ್ನಿಂದ ತಾನೆ ಕಣ್ಣಲ್ಲಿ ಆನಂದ ಬಾಷ್ಪ ಉಕ್ಕಿ ಹರಿಯುತ್ತಿದ್ದು ಇದಕಿಂತ ಹೆಚ್ಚಿಗೆ ಏನು ಬೇಕಾಗಿಲ್ಲ ಇದೆ ಮಕ್ಕಳಿಗೆ ಕಲಿಸುವ ಒಳ್ಳೆಯ ಸಂಸ್ಕಾರ. ಈ ಶಾಲೆಯಲ್ಲಿ ವಿದ್ಯಾವಂತ, ಗುಣವಂತ ಇದ್ದರೆ ಸಾಲದು ಹೃದಯವಂತರಿರಬೇಕು. ಅಂತಹ ಹೃದಯವಂತರು ಈ ಸಂಸ್ಥೆಯ ಸಂಸ್ಥಾಪಕರಾದ ಕಲಮನಿ ಸಹೊದರರಿಗೆ ಇದೆ ಎಂದರು.
ಚಿಕ್ಕರೂಗಿಯ ಪೂಜ್ಯ ಈರಣ್ಣಾ ಶಾಸ್ತ್ರಿಗಳು ಮಾತನಾಡಿ ಮಕ್ಕಳಿಗೆ ಇಂದು ಉನ್ನತ ಮಟ್ಟದ ಶಿಕ್ಷಣ ಕೊಡಿಸಿ ಡಾಕ್ಟರ್, ಇಂಜಿನೀಯರ, ಎಸಿ, ಡಿಸಿ, ಎಸ್ಪಿ ಆದವರು ತಂದೆ ತಾಯಂದಿರರು ವೃದ್ದಾಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ನಮ್ಮ ಹಳ್ಳಿಗಾಡಿನಲ್ಲಿ ಕಲಿತ ರೈತರ ಮಕ್ಕಳ ತಂದೆ ತಾಯಂದಿರು ಯಾರು ವೃದ್ದಾಶ್ರಮ ಸೇರಿಲ. ನಗರ ಪ್ರದೇಶದ ಶಾಲೆಗಳಲ್ಲಿ ಒಳ್ಳೆಯ ಸಂಸ್ಕೃತಿ ಕಲಿಸದೆ ಇರುವುದಕ್ಕೆ ಇಂತಹ ಸ್ಥಿತಿ ಬರಲು ಕಾರಣ. ಹತ್ತು ವರ್ಷ್ಗಳ ಹಿಂದೆ ಯಾವ ಗುಡಿ ಗುಂಡಾರ, ದೇವಸ್ಥಾನಗಳು ಇರಲ್ಲಿಲ್ಲ. ಹೆತ್ತಾ ತಂದೆ ತಾಯಿಗಳೆ ದೇವರು ಎಂದು ಭಾವಿಸುವ ಕಾಲವಿತ್ತು ಎಂದರು.
ಹಿರೇಬೆವನೂರ-ಹೊನಗನಹಳ್ಳಿ ಆತ್ಮಾನಂದ ಆಶ್ರಮದ ವೇದ ಮೂರ್ತಿ ಶ್ರೀ ದಯಾನಂದ ಹಿರೇಮಠಸ್ವಾಮಿಜಿಗಳು ಆಶಿರ್ವಚನ ನೀಡಿದರು.
ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಠ್ಠಲ ಕಲ್ಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಕೆಪಿಎಸ್ ಉಪಾಧ್ಯಕ್ಷ ಭೀಮಾರಾಯ ಮೇತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಪುಂಡಲಿಕ ಕಲ್ಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕಲ್ಮನಿ ನಿರೂಪಿಸಿದರು. ಶಿಕ್ಷಕ ಜಾನ್ ವಂದಿಸಿದರು.
ವೇದಿಕೆ ಮೇಲೆ ಭೀಮಾಶಂಕರ ಸಕ್ಕರೆ ಕಾರಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಗೀರಿಶ ಪಾಟೀಲ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಭಿಮರಾಯಗೌಡ ಬಿರಾದಾರ, ಕಾನಿಪ ಅಧ್ಯಕ್ಷ ಅಬುಶಾಮಾ ಹವಲ್ದಾರ, ಕಾನಿಪ ಪ್ರಧಾನಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ, ಕಾನಿಪ ಉಪಾಧ್ಯಕ್ಷ ಬೀರಪ್ಪ ಹೊಸೂರ, ಗುರಪ್ಪ ಡಂಗಿ, ಮಾಯಪ್ಪ ಪರಗೊಂಡ, ಶಾಂತಪ್ಪ ಸೋಲಾಪೂರ, ರಂಜಾನ ಕೊರಬು, ಅಂದಪ್ಪ ಹಂದ್ರಾಳ, ದೇವು ಕಂಟೀಕಾರ, ಲಕ್ಕಪ್ಪ ಯಳಮೇಲಿ ಸೇರಿದಂತೆ ಅನೇಕರು ಇದ್ದರು.
ಪೋಟೊ ಕ್ಯಾಪ್ಸನ್ ೦೯ ಇಂಡಿ ೦೧: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಡ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಮಾತಾ-ಪಿತೃ ವಂದನಾ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನಿದ್ಯ ವಹಿಸಿ ಖೇಡಗಿ ವಿರಕ್ತ ಮಠದ ಪೂಜ್ಯ ಶ್ರೀ ಶಿವಬಸವರಾಜೇಂದ್ರ ಮಹಾಸ್ವಾಮಿಜಿಗಳು ಆಶಿರ್ವಚನ ನೀಡಿದರು
ಒಳ್ಳೆಯ ಸಂಸ್ಕಾರದಿಂದ ಮಾತ್ರ ಶಾಂತಿ ನೆಮ್ಮದಿ ಸಿಗುತ್ತದೆ : ಶ್ರೀ ಶಿವಬಸವರಾಜೇಂದ್ರ ಮಹಾಸ್ವಾಮಿಜಿಗಳು


