ಬಾಗಲಕೋಟೆ: ಇಂದು ಚರಂತಿಮಠದಲ್ಲಿ ಪೂಜ್ಯಶ್ರೀಗಳು ಲೋಕಸಭಾ ಸದಸ್ಯರಾದ ಪಿ ಸಿ ಗದ್ದಿಗೌಡರ ಅವರನ್ನು ಕುಡಚಿ ರೇಲ್ವೇ ಮಾರ್ಗದ ಲೋಕಾಪೂರದ ವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ರೈಲು ಪ್ರಾರಂಭಿಸಲು ಪ್ರಯತ್ನ ಮಾಡಿ ಎಂದು ಸಂಸದರಾದ ಪಿ ಸಿ ಗದ್ದಿಗೌಡರನ್ನು ತಿಳಿಸಿದರು. ಬರಿ ಹೋರಾಟ ಮಾಡದರೇ ಸಾಲದು ತಾವು ಅಧಿಕಾರದಲ್ಲಿ ಇದ್ದೀರಿ ರೇಲ್ವೇ ಇಲಾಖೆಯ ಮೇಲೆ ಒತ್ತಡ ತಂದು ಪ್ಯಾಸೆಂಜರ್ ರೈಲು ಪ್ರಾಂಭಿಸಲು ಪ್ರಯತ್ನಿಸಬೇಕು ಅಂತಾ ತಿಳಿಸಿಸದರು.
ಇದೇ ಸಂದರ್ಭದಲ್ಲಿ ರೇಲ್ವೇ ಹೋರಾಟಗಾರರಾದ ಕುತುಬುದ್ದೀನ ಖಾಜಿ ಸಂಸದರನ್ನು ಉದ್ದೇಶಿಸಿ ಮಾತನಾಡಿ ಬಾಗಲಕೋಟದಿಂದ ಲೋಕಾಪೂರವರಗೆ ಆರು ನಿಲ್ದಾಣಗಳು ಒಳಪಟ್ಟಿದ್ದು, ಕೋಟ್ಯಾಂತರ ರೂಪಾಯಿಗಳು ಸರಕಾರ ಖರ್ಚುಮಾಡಿದೆ. ರೈಲು ಪ್ರಾರಂಭ ಇಲ್ಲದಿರುವುದರಿಂದ ಎಲ್ಲಾ ಕಟ್ಟಡಗಳು ಹಾಳಾಗಿ ಹೋಗುತ್ತಿದ್ದು, ರೈಲು ಸೇವೆ ಪ್ರಾರಂಭ ಇದ್ದರೆ ಅವು ಸಂರಕ್ಷಣೆ ಆಗುತ್ತವೆ. 2017 ರಲ್ಲಿ ಖಜ್ಜಡೊಣಿ ವರೆಗೆ ಕಾಮಗಾರಿ ಮುಗಿದು ರೈಲು ಪ್ರಾರಂಭ ಆಗದಿರುವುದರಿಂದ ಎಲ್ಲಾ ಕಟ್ಟಡಗಳು ಹಾಳಾಗಿ ಪುನರ್ ನಿರ್ಮಾಣ ಗೊಂಡಿವೆ. ಈಗ ಲೋಕಾಪೂರ ರೈಲು ನಿಲ್ದಾಣ ಪೂರ್ಣಗೊಂಡು ಸೇವೆಗೆ ಸಜ್ಜಾಗಿ ನಿಂತಿದೆ. ತಾರತಮ್ಯ ಮಾಡದೇ ಅತೀ ಶೀಘ್ರದಲ್ಲಿ ರೈಲು ಸೇವೆ ಪ್ರಾಂಭಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಲೋಕಾಪೂರ ಯಾದವಾಡ ಮುಧೋಳ ಜಮಖಂಡಿ ಭಾಗದಲ್ಲಿ ರೇಲ್ವೇ ಕಾಮಗಾರಿ ನಿದಾನಗತಿಯಲ್ಲಿ ಸಾಗಿದ್ದು ವೇಗದ ಗತಿಯಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿ ರಬಕವಿ ಬನಹಟ್ಟಿ ತೇರದಾಳ ಕುಡಚಿ ವರೆಗೆ ಯೋಜನೆಗೆ ಒಳಪಡುವ ಭೂಮಿ ಸ್ವಚ್ಚಮಾಡಲು ಆರು ಕೋಟಿ ವ್ವಚ್ಚದಲ್ಲಿ ರೇಲ್ವೇ ಇಲಾಖೆ ಟೆಂಡರ್ ತೆರೆದಿದ್ದು ಇದೆ. ಅದರ ಮಾಹಿತಿ ಪಡೆದು ಶೀಘ್ರದಲ್ಲಿ ಕುಡಚಿ ವರೆಗೂ ಪೂರ್ಣ ಪ್ರಮಾಣದ ಕಾಮಗಾರಿ ಪ್ರಾರಂಭಿಸಲು ರೇಲ್ವೇ ಇಲಾಖೆಗೆ ಸೂಚಿಸಬೇಕು ಎಂದು ಕುತುಬುದ್ದೀನ ಖಾಜಿ ಸಂಸದರನ್ನು ಒತ್ತಾಯಿಸಿದರು.
ಅದಕ್ಕೆ ಸ್ಪಂದಿಸಿದ ಸಂಸದರು ಈಗಾಗಲೇ ಲೋಕಾಪೂರದ ವರೆಗೆ ಪ್ರಯಾಣಿಕರ ರೈಲು ಪ್ರಾರಂಭಿಸಲು ರೈಲ್ವೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈಲ್ವೇ ಸಚಿವ ಶ್ರೀ ವಿ ಸೋಮಣ್ಣ ರವರು ಉದ್ಘಾಟನೆ ಸಮಯ ನಿಗದಿಪಡಿಸಿಲ್ಲ. ಅತೀ ಶೀಘ್ರದಲ್ಲಿ ದಿನಾಂಕ ಪ್ರಕಟಿಸುವ ಭರವಸೆ ಇದೆ ಎಂದರು. ಕುಡಚಿವರೆಗೆ ಪೂರ್ಣ ಕಾಮಗಾರಿ ಪ್ರಾರಂಭಕ್ಕೆ ಪ್ರಯತ್ನ ಮಾಡುತ್ತೇನೆ ನಡೆದಂತಹ ಕಾಮಗಾರಿಗೆ ವೇಗ ಗತಿಯಲ್ಲಿ ಪ್ರಾರಂಭಿಸಲು ಪತ್ರ ಬರೆದು ರೇಲ್ವೇ ಇಲಾಖೆಗೆ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ್ ರಾಜ್ಯ ಸಭಾ ಸದಸ್ಯರಾದ ನಾರಯಣಸಾ ಬಾಂಡಗೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ ಮಲ್ಲನ್ನ ನಾಡಗೌಡರು ರವಿ ಪಟ್ಟಣದ ಶ್ರೀನಿವಾಸ ಬಳ್ಳಾರಿ ಮೂನುದ್ದೀನ ಖಾಜಿ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.