ಜುಲೈ 20ಕ್ಕೆ ಝೀರೋ ಬ್ಯಾಲನ್ಸ್ ಇರುವ ಪೇಟಿಎಂ ವ್ಯಾಲಟ್​ಗಳು ಬಂದ್!

Ravi Talawar
ಜುಲೈ 20ಕ್ಕೆ ಝೀರೋ ಬ್ಯಾಲನ್ಸ್ ಇರುವ ಪೇಟಿಎಂ ವ್ಯಾಲಟ್​ಗಳು ಬಂದ್!
WhatsApp Group Join Now
Telegram Group Join Now

ನವದೆಹಲಿ, ಜೂನ್ 25: ಆರ್​ಬಿಐನಿಂದ ನಿರ್ಬಂಧಕ್ಕೆ ಒಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆ ತನ್ನಲ್ಲಿರುವ ನಿಷ್ಕ್ರಿಯ ಖಾತೆಗಳನ್ನು ಮುಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ಕಾಣದ ಹಾಗೂ ಶೂನ್ಯ ಬ್ಯಾಲನ್ಸ್ ಇರುವ ವ್ಯಾಲಟ್​ಗಳನ್ನುಬಂದ್ ಮಾಡಲಿದೆ. ಜುಲೈ 19ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. 2024ರ ಜುಲೈ 20ಕ್ಕೆ ಈ ವ್ಯಾಲಟ್​ಗಳು ಅಸ್ತಿತ್ವದಲ್ಲಿ ಇರುವುದಿಲ್ಲ.

ಪೇಟಿಎಂ ಆ್ಯಪ್​ನಲ್ಲಿ ಇರುವ ವ್ಯಾಲಟ್​ಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಖಾತೆಯನ್ನು ಬಳಸಲಾಗುತ್ತಿತ್ತು. ಪಿಪಿಬಿಎಲ್ ಅನ್ನು ಆರ್​ಬಿಐ ನಿರ್ಬಂಧಿಸಿದ್ದರಿಂದ ವ್ಯಾಲಟ್ ಕೂಡ ನಿರ್ಬಂಧಿತವಾಗಿದೆ. ಪಿಪಿಬಿಎಲ್ ಅಕೌಂಟ್​ಗೆ ಹೇಗೆ ಹಣ ಡೆಪಾಸಿಟ್ ಇಡಲು ಆಗುವುದಿಲ್ಲವೋ, ವ್ಯಾಲಟ್​ಗೂ ಹಣ ಜಮೆ ಮಾಡಲು ಆಗುವುದಿಲ್ಲ.

ಈ ಮೊದಲೇ ವ್ಯಾಲಟ್​ನಲ್ಲಿ ಹಣ ಇದ್ದರೆ ಅದನ್ನು ಅನಿರ್ಬಂಧಿತವಾಗಿ ಬಳಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಆ ಹಣ ವರ್ಗಾಯಿಸಬಹುದು. ಅಥವಾ ಪೇಮೆಂಟ್ ಮಾಡಬಹುದು. ನೀವು ಅದನ್ನು ಪೂರ್ಣವಾಗಿ ಖಾಲಿ ಮಾಡುವವರೆಗೂ ಆ ವ್ಯಾಲಟ್ ಅಸ್ತಿತ್ವದಲ್ಲಿ ಇರುತ್ತದೆ.

ಈಗ ಕಳೆದ ಒಂದು ವರ್ಷದಿಂದ ಶೂನ್ಯ ಬ್ಯಾಲನ್ಸ್​ನಲ್ಲಿ ಇರುವ ವ್ಯಾಲಟ್​ಗಳನ್ನು ಮಾತ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚುತ್ತಿದೆ. ಹೀಗಾಗಿ, ಯಾವ ಪೇಟಿಎಂ ಬಳಕೆದಾರರು ಚಿಂತೆ ಪಡುವ ಅಗತ್ಯ ಇಲ್ಲ. ನೀವೇ ಸ್ವತಃ ವ್ಯಾಲಟ್ ಮುಚ್ಚಲು ಅವಕಾಶ ಇದೆ.

WhatsApp Group Join Now
Telegram Group Join Now
Share This Article