ರಾಯಬಾಗ: ಬಡತನ ಬವಣೆಯಲ್ಲಿ ಕಷ್ಟಪಟ್ಟು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ಸ್ಪೂರ್ತಿ ಅವರ ಆತ್ಮ ಬಲವನ್ನು ಇಮ್ಮಡಿಗೊಳಿಸುತ್ತದೆ ಎಂದು ಬೆಂಗಳೂರಿನ ಸದೃಶಂ ಸರ್ಕಾರೇತರ ಸಂಸ್ಥೆಯ ಸದಸ್ಯ ಪವನ್ ಕೆ ಎಂ ಹೇಳಿದರು.
ಸಮೀಪದ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಜ್ಞಾನ ಸದೃಶಂ ಸರಕಾರೇತರ ಸಂಸ್ಥೆಯ ವತಿಯಿಂದ 1.50 ಲಕ್ಷ ರೂ. ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
20204 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಮೂರು ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲೆಂದು ತಲಾ 10 ಸಾವಿರ ರೂ.ನಂತೆ ಒಟ್ಟು 30 ಸಾವಿರ ರೂ. ಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು ನೀಡಲಾಗುವುದೆಂದು ಹೇಳಿದರು.
ಮಲಕಾರಿ ನೂಲಿ ಮಾತನಾಡಿ, ಸದೃಶಂ ಸಂಸ್ಥೆಯ ಶೈಕ್ಷಣಿಕ ಕಾಳಜಿ ನಿಜಕ್ಕೂ ಶ್ಲಾಘನೀಯ. ಇವರು ನೀಡಿದ ಮೌಲ್ಯದ ಈ ಕಲಿಕಾ ಸಾಮಗ್ರಿಗಳನ್ನು ತಾವೆಲ್ಲರೂ ಚೆನ್ನಾಗಿ ಉಪಯೋಗಿಸಿಕೊಂಡು ಶಾಲೆಗೆ ಹಾಗೂ ನಿಮ್ಮ ಪಾಲಕರಿಗೆ ಕೀರ್ತಿ ತರುವಂತಾಗಬೇಕೆಂದು ಆಶಿಸಿದರು.
ಸದೃಶಂ ತಂಡದ ಸದಸ್ಯರು ಶಾಲಾ ವಿದ್ಯಾರ್ಥಿಗಳೊಂದಿಗೆ ವಿವಿಧ ಆಟಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ನೀಡಿದರು. ಈ ವೇಳೆ ಸದೃಶಂ ತಂಡದ ಕಿರಣ್, ನವೀನ್, ಕಿರಣ್, ಮನು, ಶ್ರೀನಿಧಿ, ಸುಮುಖ, ಪ್ರತಾಪ್, ಶ್ರೀಕಾಂತ್, ಭರತ್, ಹರೀಶ್, ನಿತಿನ್, ಹಿರಿಯ ಶಿಕ್ಷಕರಾದ ಎಸ್ ಎಸ್ ನಾಯಿಕ್, ಶಾಲೆಯ ಶಿಕ್ಷಕರುಗಳಾದ ಎಸ್ ಎಂ ಮುಲ್ಲಾ, ಎ ಆಯ್ ಕುರಬೇಟ, ಗ್ರಾಪಂ ಸದಸ್ಯರುಗಳಾದ ಈರಪ್ಪ ಹಿಡಕಲ್, ದಯಾನಂದ ಬೀಳಗಿ, ಸುಧಾಕರ್ ಪಾಟೀಲ್, ಹಾಗೂ ಸದಾಶಿವ ಚೌಗಲಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿ. ಡಿ. ಉಪಾಧ್ಯೆ ಸ್ವಾಗತಿಸಿ, ಎನ್ ಡಿ ಕುಕನೂರ ನಿರೂಪಿಸಿ, ಎಸ್ ಬಿ ಹಳ್ಳದಮಳ ವಂದಿಸಿದರು.


