ನಗರದ ವಸತಿ ನಿಲಯ ಗಳಿಗೆ ಪಟೇಲ್ ಭೇಟಿ-ಸಮಸ್ಯೆ ಗಳಿಗೆ ನೇರ ಸ್ಪಂದನೆ 

Ravi Talawar
ನಗರದ ವಸತಿ ನಿಲಯ ಗಳಿಗೆ ಪಟೇಲ್ ಭೇಟಿ-ಸಮಸ್ಯೆ ಗಳಿಗೆ ನೇರ ಸ್ಪಂದನೆ 
WhatsApp Group Join Now
Telegram Group Join Now
ಕೊಪ್ಪಳ ಸಪ್ಟಂಬರ್ 22, ನಗರದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಗಳಿಗೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಶನಿವಾರದಂದು ಭೇಟಿ ನೀಡಿ ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಆಲಿಸಿದರು ಮತ್ತು ಅವರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಅವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು,
ವಸತಿ ನಿಲಯಗಳಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಗಳ ಈಡೇರಿಕೆಗಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗುವುದು ಸ್ಥಳೀಯ ಶಾಸಕರ ಗಮನಕ್ಕೂ ಸಹ ತರಲಾಗುವುದು ನಗರ ಸಭೆ ವತಿಯಿಂದ ಕೈಗೊಳ್ಳಬಹುದಾದ ಕೆಲಸ ಕಾರ್ಯ ಗಳಾದ ಕುಡಿಯುವ ನೀರು ಅಲ್ಲದೆ ವಸತಿ ನಿಲಯ ಗಳಿಗೆ ಹೋಗಿ ಬರಲು  ರಸ್ತೆಗಳ ದುರಸ್ತಿ ಕಾರ್ಯ ,ಚರಂಡಿಗಳ ನಿರ್ಮಾಣ ಸೇರಿದಂತೆ ಸ್ವಚ್ಛತೆ ಕಾಪಾಡುವಂತಹ ಕೆಲಸ ಕೂಡಲೇ ಕೈಗೊಳ್ಳಲಾಗುವುದು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ವಿದ್ಯಾರ್ಥಿಗಳ ಸಮಸ್ಯೆಗೆ ನೇರ ಸ್ಪಂದನೆ ನೀಡಿ ಅದರ ನಿವಾರಣೆಗಾಗಿ ಶ್ರಮಿಸುವುದಾಗಿ ತಿಳಿಸಿದರು, ವಸತಿ ನಿಲಯದ ನಿಲಯ ಪಾಲಕರು ,ವ್ಯವಸ್ಥಾಪಕರು, ಮತ್ತು ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article