ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೈಹಿಕ, ಮಾನಸಿಕ ನೆಮ್ಮದಿ. ನಾನಾ ಸಾಹೇಬ ಪಾಟೀಲ

Ravi Talawar
ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೈಹಿಕ, ಮಾನಸಿಕ ನೆಮ್ಮದಿ. ನಾನಾ ಸಾಹೇಬ ಪಾಟೀಲ
WhatsApp Group Join Now
Telegram Group Join Now
ನೇಸರಗಿ,24: ಕ್ರೀಡೆಗಳಲ್ಲಿ ಇಂದಿನ ಯುವಕರು ಪಾಲ್ಗೊಂಡು ತಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ನೇಗಿನಹಾಳ ಪಿಕೆಪಿಎಸ ಅಧ್ಯಕ್ಷರಾದ ನಾನಸಾಹೇಬ ಪಾಟೀಲ ಹೇಳಿದರು.
     ಅವರು ಸಮೀಪದ ಹೊಸಕೋಟಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆಯ ನಿಮಿತ್ಯವಾಗಿ ಅಯೋಗಿಸಲಾಗಿದ್ದ ಮುಕ್ತ ಟೆನಿಸ ಬಾಲ ಕ್ರಿಕೆಟ್ ಪಂದ್ಯಾವಳಿ ಹೊಸಕೋಟಿ ಪ್ರಿಮಿಯರ ಲೀಗ್ ಉದ್ಘಾಟಿಸಿ ಮಾತನಾಡಿದರು.
    ಯುವ ಕಾಂಗ್ರೆಸ ಮುಖಂಡರಾದ ಸಚಿನ್ ಪಾಟೀಲ ಮಾತನಾಡಿ ಇಂದಿನ ಯುವಕರು ಮೊಬೈಲ್ ಬಳಕೆ ಅತಿಯಾಗಿ ಮಾಡಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಆದ್ದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಿ ಆಟದ ಜೊತೆಗೆ ಪಾಠದಲ್ಲಿ ಪಾಲ್ಗೊಂಡು ಬುದ್ದುವಂತರಾಗಬೇಕು ಎಂದರು.
   ಈ ಸಂದರ್ಭದಲ್ಲಿ ಅಡಿವಪ್ಪ ಮಾಳನ್ನವರ್, ಸದಾನಂದ್ ಖೋದನಪುರ್, ಪ್ರಕಾಶ್ ಬಡವಣ್ಣವರ್,ಮಲ್ಲಿಕಾರ್ಜುನ್ ಕಲ್ಲೋಳಿ, ದೇಮಪ್ಪ ಮುಂಡಗಿ, ಶುಭಾಶ ಮಲ್ಲಾಪುರ, ಶಿವಾನಂದ ಬಾಳೆಕುಂದ್ರಿ ವಿದ್ಯಾ ದೊಡಮನಿ ಸಂಗಮೇಶ ರೋಳಿ,ಬಿ ಎ ನಾಯ್ಕರ, ನಾಗರಾಜ ನಂಜರಗಿ ಸೇರಿದಂತೆ ಗ್ರಾಮಸ್ಥರು ಇದ್ದರು.
WhatsApp Group Join Now
Telegram Group Join Now
Share This Article