ಉದ್ಯಾನವನಗಳು ಪ್ರಕೃತಿ, ಆರೋಗ್ಯ, ಮನರಂಜನೆ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಸಹಾಯಕ: ಶಾಸಕ ಸವದಿ

Ravi Talawar
ಉದ್ಯಾನವನಗಳು ಪ್ರಕೃತಿ, ಆರೋಗ್ಯ, ಮನರಂಜನೆ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಸಹಾಯಕ: ಶಾಸಕ ಸವದಿ
WhatsApp Group Join Now
Telegram Group Join Now
ಅಥಣಿ: ಉದ್ಯಾನವನವು ಜನರ ಆರೋಗ್ಯ, ಮನರಂಜನೆ ಹಾಗೂ ಪರಿಸರ ಸಮತೋಲನ ಕಾಪಾಡುವ ಮಹತ್ವದ ಸ್ಥಳವಾಗಿದೆ. ಆಧುನಿಕ ಯುಗದ ಜೀವನದಲ್ಲಿ ಜನರಿಗೆ ಮನಸ್ಸಿಗೆ ಶಾಂತಿ, ದೇಹಕ್ಕೆ ತಾಜಾತನ ನೀಡುವ ನೆಲೆಗಳಾಗಿ ಉದ್ಯಾನವನಗಳು ಪರಿಣಮಿಸಿವೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅಥಣಿ ಪಟ್ಟಣದ ಶಿವಯೋಗಿ ನಗರದಲ್ಲಿನ ಸಾವಿತ್ರಿಬಾಯಿ ಪುಲೆ ರಸ್ತೆ ಹಾಗೂ ಎಲ್ ಎಸ್ ಪಾರ್ಕ ಉದ್ಯಾನವನ ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕ ಲಕ್ಷö್ಮಣ ಸವದಿ ಅವರು ಉದ್ಯಾನವನವು ಕೇವಲ ಮನರಂಜನೆಗೆ ಮಾತ್ರವಲ್ಲ, ಆರೋಗ್ಯ ಕಾಪಾಡಲು ಸಹ ಉಪಯುಕ್ತವಾಗಿದೆ. ಬೆಳಿಗ್ಗೆ ಜಾಗಿಂಗ್, ಯೋಗ, ವ್ಯಾಯಾಮ ಮಾಡಲು ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ. ಇದರಿಂದ ಶಾರೀರಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ನೆಮ್ಮದಿ ಕೂಡ ದೊರಕುತ್ತದೆ. ಅಲ್ಲದೆ ಶಿವಯೋಗಿ ನಗರದ ಶೇ.೯೦ರಷ್ಟು ಕುಟುಂಬಗಳಿಗೆ ಹಕ್ಕುಪತ್ರಗಳೇ ಇಲ್ಲದಿರುವದರಿಂದ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಉಪ ಗ್ರಾಮಗಳ ವ್ಯಾಪ್ತಿಯಲ್ಲಿ ಸೇರಿಸಿ ಎಲ್ಲ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡುವ ಕಾರ್ಯಕ್ಕೆ ಪ್ರಾಮಾಣಿಕ ಪ್ರೇಯತ್ನ ಮಾಡುತ್ತೇನೆ ಎಂದು ಹೇಳಿದರು ಶೇಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿದರು.
ಈ ವೇಳೆ ಸಂಕೋನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ ಗಡದೆ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಸದಾಶಿವ ಬುಟಾಳಿ, ಮುಖಂಡರಾದ ಶಿವಾನಂದ ದಿವಾನಮಳ, ರಾಕೇಶ ಮೈಗೂರ, ಮಹಾದೇವ ಹೊನ್ನೋಳ್ಳಿ, ನಾನಾಸಾಬ ಗೋಟಖಿಂಡಿ, ಗಿರೀಶ ದಿವಾನಮಳ, ಸುರೇಶ ಅಲಬಾಳ, ಮಲ್ಲು ಕುಳ್ಳೋಳ್ಳಿ, ಮುತ್ತು ಮೊಕಾಶಿ, ಬಸವರಾಜ ತೇರದಾಳ, ರಾಜೂ ಹಳ್ಳದಮಳ, ಆಕಾಶ ಬುಟಾಳಿ, ರಾಮನಗೌಡ ಪಾಟೀಲ, ಬಾಬು ಬಕಾರಿ, ಶ್ರೀಶೈಲ ಹಳ್ಳದಮಳ, ಶಿವು ಬಳ್ಳೋಳ್ಳಿ, ಶಿವಪಾದ ರೋಖಡಿ, ಪ್ರಶಾಂತ ತೋಡಕರ, ರವಿ ಬಡಕಂಬಿ, ಶಿವರುದ್ರ ಘೋಳಪ್ಪನವರ, ಶೇಖರ ಕನಕರೆಡ್ಡಿ, ಬಸು ತೇರದಾಳ, ರಾಹುಲ್ ನೂಲಿ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪಿಡಿಓ ಬೀರಪ್ಪ ಕಡಗಂಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article