ಹಸಿರು ಕ್ರಾಂತಿ ವರದಿ, ಜಮಖಂಡಿ; ವೃದ್ಧಾಪ್ಯದಲ್ಲಿ ಮನೆಗೆ ಆಸರೆ ಯಾಗುತ್ತಾನೆ ಎಂದು ಕೊಂಡಿದ್ದ ಮಗನೇ ಕ್ರೂರಿಯಾಗಿ, ತಂದೆ ತಾಯಿ, ಸಹೋದರ, ಸಂಬಂಧಿಕರಿಗೆ ಕಂಟಕಪ್ರಾಯನಾಗಿ, ಕುಡಿತದ ಚಟಕ್ಕೆ ಬಿದ್ದು ನಿತ್ಯ ನರಕ ತೋರಿಸುತ್ತಿದ್ದ ಮಗನಿಗೆ ತಕ್ಕ ಪಾಠ ಕಲಿಸಲು ಹೋಗಿ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟಿದ್ದರ ಪರಿಣಾಮವಾಗಿ ನಡೆದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ, ತಂದೆ,ತಾಯಿ, ಸೋದರ ಜೈಲು ಪಾಲಾಗಿದ್ದಾರೆ. ವರ್ಷಕ್ಕೊಮ್ಮೆ ರಜೆಗೆಂದು ಊರಿಗೆ ಬರುತ್ತಿದ್ದ ಸಹೋದರ ಹಾಗೂ ಪಾಲಕರು ಕೊಲೆ ಆರೋಪ ಎದುರಿಸುತ್ತಿದ್ದಾರೆ.
ತಾಲೂಕಿನ ಬಿದರಿ ಗ್ರಾಮದ ಪರಪ್ಪ ಕಾನಟ್ಟಿ ಪತ್ನಿ ಶಾಂತಾ ಕಾನಟ್ಟಿ, ಕೃಷಿಕರಾಗಿದ್ದು ತೊಟದ ಮನೆಯಲ್ಲಿ ವಸವಾಗಿದ್ದರು ಹಿರಿಯ ಮಗ ಬಸವರಾಜ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ, ಇನ್ನೊಬ್ಬ ( ಕೊಲೆಯಾದ ಅನೀಲ ಕಾನಟ್ಟಿ) ತಂದೆತಾಯಿಯ ಜೊತೆಗಿದ್ದ

ದುಷ್ಚಟದ ದಾಸನಾಗಿ ನಿತ್ಯ ಹಣ ನೀಡುವಂತೆ ತಂದೆ-ತಾಯಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ದ್ರಾಕ್ಷಿ, ಕಬ್ಬು ಬೆಳೆದು ಸಂಸಾರ ನಡೆಸಿಕೊಂಡು ಹೊಗುತ್ತಿದ್ದ ತಂದೆಗೆ ಕಂಟಕ ಪ್ರಾಯನಾಗಿ ಪ್ರತಿನಿತ್ಯ ಕುಡಿದ ಅಮಲಿನಲ್ಲಿ ಜಮೀನಿನಲ್ಲಿ ಪಾಲು ಕೊಡು, ಇಲ್ಲವೇ ಹಣಕೊಡು ಎಂದು ಪೀಡಿಸಿ ಜಗಳವಾಡುತ್ತಿದ್ದ, ರಜೆಗೆಂದು ಬಂದಿದ್ದ ಸೋದರ ಹಾಗೂ ಅವನ ಮಕ್ಕಳನ್ನು ಇವನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.
ಫ್ಯಾನ ವಿಷಯಕ್ಕೆ ಜಗಳ ತೆಗೆದು ಗಲಾಟೆ ಪ್ರಾರಂಭಿಸಿ, ಮಧ್ಯದ ಅಮಲಿನಲ್ಲಿ ಅಣ್ಣನ ಮಗಳಿಗೆ ಸ್ಕ್ರೂಡೈವರ್‌ನಿಂದ ಚುಚ್ಚಲು ಹೋಗಿದ್ದ ಅದನ್ನು ಕಸಿದ ತಂದೆ ಹಾಗೂ ಸಹೊದರ ಬುದ್ದಿಹೇಳಲು ಹೋದಾಗ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್‌ನ ಪೈಪ್‌ಕಿತ್ತು ಬೆಂಕಿ ಹಚ್ಚಿ ಮನೆಯಲ್ಲಿದ್ದವನ್ನು ಸುಟ್ಟು ಹಾಕುತ್ತೇನೆ ಎಂದು ಗಲಾಟೆ ಪ್ರಾರಂಭಿಸಿದ್ದ ಕೋಪಗೊಂಡ ತಂದೆ ತಾಯಿ ಹಾಗೂ ಸಹೊದರ ಇವನನ್ನು ಹಗ್ಗದಿಂದ ಕೈಕಾಲು ಬಿಗಿದು ಹೊರಗೆ ತಂದಿದ್ದಾರೆ ಸುಟ್ಟರೇ ಹೇಗಾಗುತ್ತದೆ ಎಂಬುದನ್ನು ತೋರಿಸುತ್ತೇವೆ ಎಂದು ಮನೆಯಲ್ಲಿದ್ದ ಡಿಜೈಲ್ ಸುರುವಿ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದ್ದು ಅಷ್ಟರಲ್ಲೇ ಕ್ರೂರಿಮಗ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಶುಕ್ರವಾರವೇ ಇಷ್ಟೆಲ್ಲಾ ಘಟನೆ ನಡೆದರು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಪರಪ್ಪ ಮಲ್ಲಪ್ಪ ಕಾನಟ್ಟಿ (62), ತಾಯಿ ಶಾಂತಾ ಪರಪ್ಪ ಕಾನಟ್ಟಿ (55) ಸಹೋದರ ಬಸವರಾಜ ಪರಪ್ಪ ಕಾನಟ್ಟಿ (35 ), ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರವೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿ ನೀರವ ಮೌನ ಆವರಿಸಿದ್ದು ತೋಟದ ಮನೆ ಬಿಕೋ ಎನ್ನುತ್ತಿದೆ. ಸಿಟ್ಟಿನ ಕೈಗೆ ಬುದ್ದಿಕೊಟ್ಟ ಕುಟುಂಬ ಜೈಲು ಪಾಲಾಗಿದ್ದು ಆಸ್ತಿಗಾಗಿ ಪೀಡಿಸುತ್ತಿದ್ದವ ಮಸಣ ಸೇರಿದ್ದಾನೆ.
ಜಮಖಂಡಿ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅಪ್ಪಣ್ಣ ಐಗಳಿ, ಅಪರಾಧ ವಿಭಾಗ ಪಿಎಸ್‌ಐ ಎನ್.ಎಲ. ಎಲಿಗಾರ ನೇತೃತ್ವದ ತಂಡ ಕೊಲೆ ಪ್ರಕರಣ ಬೇಧಿಸಿ ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.