ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಜಾಲತಾಣ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ

Sandeep Malannavar
ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಜಾಲತಾಣ ಅಧ್ಯಕ್ಷರಾಗಿ ಪರಶುರಾಮ ಮೇತ್ರಿ ಆಯ್ಕೆ
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
WhatsApp Group Join Now
Telegram Group Join Now

ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ಪರಿಶಿಷ್ಟ ವಿಭಾಗದ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಮಹಾಲಿಂಗಪುರ ಪಟ್ಟಣದ ಪರಶುರಾಮ ಮೇತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜು ಮಣ್ಣಿಕೇರಿ ತಿಳಿಸಿದ್ದಾರೆ.
ಮೇತ್ರಿಯವರು ತೆರದಾಳ ಮತಕ್ಷೇತ್ರದ ಪರಿಶಿಷ್ಟ ಜಾತಿ ಪಂಗಡದ ನಾಯಕ, ಸಾರ್ವಜನಿಕ ಬದುಕಿನ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷದ ಬಲ ವರ್ಧನೆ ಸಲುವಾಗಿ ಇವರಿಗೆ ಹೆಚ್ಚಿನ ಹೊಣೆಯನ್ನು ನೀಡಿದ್ದು, ತರುವಾಯ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಎಲ್ಲರನ್ನೂ ಒಳಗೊಂಡಂತೆ ಅವರೆಲ್ಲರ ವಿಶ್ವಾಸದ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಪಕ್ಷದ ಮೂಲಗಳು ತಿಳಿಸಿವೆ.
ಸೇವೆ ಗುರುತಿಸಿ ಶಿಫಾರಸು ಮಾಡಿದ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಅವರನ್ನು ಸೇರಿದಂತೆ ಉಸ್ತುವಾರಿ ಸಚಿವರಾದ ಆರ್. ಬಿ.ತಿಮ್ಮಾಪುರ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಮತ್ತು ಪರೋಕ್ಷ ಹಾಗೂ ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮೇತ್ರಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article