ಧಾರವಾಡ ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಲಾಯಿತು. ಧಾರವಾಡ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ನಡೆದ ರೌಡಿಶೀಟರ್ ಪರೇಡ್ ನಲ್ಲಿ ಖಡಕ್ ಎಚ್ಚರಿಕೆ ಸಂದೇಶ ರವಾನಿಸಲಾಯಿತು. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಜೀವನ ಮಾಡಿ, ಇಲ್ಲದಿದ್ದರೇ ನಾವೂ ಚೆನ್ನಾಗಿ ಪಾಠ ಕಲಿಸುತ್ತೇವೆ ಎಂದು ಧಾರವಾಡ ಎಸಿಪಿ ಸಿದ್ಧನಗೌಡ ಪಾಟೀಲ ಅವರು, ರೌಡಿಷೀಟರ್‌ಗಳಿಗೆ ಎಚ್ಚರಿಕೆ ನೀಡಿದರು.
ಧಾರವಾಡದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆಯ 175 ರೌಡಿಷೀಟರ್‌ಗಳ ಹಾಗೂ ರಾತ್ರಿಯಾದರೇ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ಪೊಲೀಸರು ಮನೆಗೆ ತೆರಳಿ ಶಾಕ್ ನೀಡಿದ್ದರು.ನಂತರ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರೇಡ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು 1158 ರೌಡಿಶೀಟರ್ ಗಳ ಮನೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ದಾಳಿ ವೇಳೆ ಮೊಬೈಲ್ ಪೋನ್ . ದ್ವಿಚಕ್ರ ವಾಹನಗಳು. ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ
ಶಹರ ಠಾಣೆಯ ನಾಗೇಶ ಕಾಡದೇವರಮಠ, ಉಪನಗರ ಠಾಣೆಯ ದಯಾನಂದ ಶೇಗುಣಸಿ, ವಿದ್ಯಾಗಿರಿ ಠಾಣೆಯ ಸಂಗಮೇಶ ದಿಡಿಗನಾಳ ಸೇರಿದಂತೆ ಮೂರು ಠಾಣೆಯ ಪಿಎಸ್ಐಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.