ಸುವರ್ಣ ಸೌಧದತ್ತ ಹೊರಟಿದ್ದ ಪಂಚಮಸಾಲಿಗರಿಗೆ ತಡೆಯೊಡ್ಡಿದ ಪೊಲೀಸರು
ಸ್ವಾಮೀಜಿ, ಬೆಲ್ಲದ ಸೇರಿ ಹಲವರು ಪೊಲೀಸ್ ವಶಕ್ಕೆ
ಕೂಡಲೇ ಸರ್ಕಾರ ಲಿಂಗಾಯತರ ಕ್ಷಮೆ ಕೇಳಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಕಾಂಗ್ರೆಸ್ ಸರ್ಕಾರಕ್ಕೆ ಟಿಪ್ಪು ಜಯಂತಿ ಬೇಕಿದೆ:ಬಸನಗೌಡ ಪಾಟೀಲ ಯತ್ನಾಳ
ಬೆಳಗಾವಿ.- ಕಳೆದ ವರ್ಷ ನಡೆದ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಪಂಚಮಸಾಲಿ ಲಿಂಗಾಯತ ಸಮಾಜದ ಬಹು ದಿನಗಳ ಬೇಡಿಕೆಗಾಗಿ 2 ಎ ಮೀಸಲಾತಿಗೆ ಅಗ್ರಹಿಸಿ ಕೊಂಡಸಕೊಪ್ಪ ಹೊಲದಲ್ಲಿ ಆಯೋಜನೆ ಮಾಡಿದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಮುಗ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿ ಇಂದು ದಿ. 10 – 12-2025 ಕ್ಕೆ ಒಂದು ವರ್ಷವಾದ ಪ್ರಯುಕ್ತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ಭವನದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೆ ಸಹಸ್ರಾರು ಪಂಚಮಸಾಲಿ ಸಮಾಜದ ಜನರು ಸೇರಿಕೊಂಡು ಮಾಜಿ ಕೇಂದ್ರದ ಮಂತ್ರಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ ಸಮಾಜದ ಅನೇಕ ಶಾಸಕರು, ಮಾಜಿ ಶಾಸಕರು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡದ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಲಾಯಿತು.

ಸಭೆಯ ಮುನ್ನ ಪತ್ರಿಕಾಗೋಷ್ಠಿ ಉದ್ದೇಸಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ರಾಜ್ಯದಲ್ಲಿ ಪ್ರಸಕ್ತ ಸರ್ಕಾರ ಮುಸ್ಲಿಂ ಪರವಾಗಿ ಕೆಲಸ ಮಾಡುತ್ತಿದೆ. ಹಿಂದೆ ಬಸವರಾಜ ಬೊಮ್ಮಾಯಿಯವರು ಜಾರಿಗೆ ತಂದಂಥ 2 ಡಿ ಆದರೂ ಜಾರಿಗೆ ತನ್ನಿ, ಅದನ್ನು ಗುತ್ತಿಗೆದಾರರಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡಿದ್ದಾರೆ ಏಕೆಂದರೆ ಅವರು ಟಿಪ್ಪು ವಂಶಸ್ಥರಿಂದ ಮಾತ್ರ ಅಧಿಕಾರಕ್ಕೆ ಬಂದಿಗೆ ಅದಕ್ಕಾಗಿ ಟಿಪ್ಪು ಅನುಯಾಯಿ ಆಗಿದ್ದಾರೆ ಸಿ ಎಮ್ ಸಿದ್ರಾಮಯ್ಯ ಅವರು ಸ್ಟಂತ ಸಮಾಜ ಹಾಲುಮತ ಸಮಾಜಕ್ಕೆ ಎಸ್ ಸಿ ಜಾತಿ ಕಲ್ಪಿಸಲು ಆಗುತ್ತಿಲ್ಲ. ಪಂಚಮಸಾಲಿ ಹೋರಾಟಕ್ಕೆ ನ ಏನು ಬೇಕಾದರೂ ಮಾಡುತ್ತೇನೆ ಎನ್ನುವ ಅಕ್ಕಾ ಅವರು ಮಂತ್ರಿ ಆಗಿದ್ದಾರೆ, ಇನ್ನೊಬ್ಬ ಮಂತ್ರಿ ವಂಚಿತ ಆಗಿದ್ದಾನೆ, ಇನ್ನೊಬ್ಬ ಮಾಜಿ ಆಗಿದ್ದಾನೆ ಎಂದರು. ಸದನದಲ್ಲಿ ಮಾತನಾಡಿದ ಶಾಸಕನಿಗೆ ಸಿ ಎಮ್ ಮಸೀದಿಯಲ್ಲಿ ಪಾಠ ಹೇಳಿದ್ದಾರೆ. ಇಂದು ಆತ ಶಾಂತನಾಗಿದ್ದಾನೆ. ಕಳೆದ ವರ್ಷ ಅಣ್ಣ ನೀಡುವ ಅನ್ನದಾತ ರೈತ ಪಂಚಮಸಾಲಿ ಸಮಾಜದವರನ್ನೇ ಲಾಠಿಯಿಂದ ಬಡಿಸಿದರೆ ಇವರು 2028 ಸಂಪೂರ್ಣ ಮಾಯಾ ಅಗಲಿದ್ದಾರೆ ಎಂದರು. ಪಂಚಮಸಾಲಿ ಮೀಸಲಾತಿ ಹೋರಾಟ ಮುಂದುವರಿಯುತ್ತೆ ಇದ್ದಕ್ಕೆ ಎಲ್ಲ ನಾಯಕರು ಸಾತ್ ನೀಡಿದ್ದಾರೆ.ಕಾನೂನು ಬಾಹಿರವಾಗಿ ಮೀಸಲಾತಿ ಮೀಸಲಾತಿ ಕೇಳುತ್ತಾರೆ ಅಂತಾರೆ ಈಗ ಕಾನೂನು ಬಾಹಿರವಾಗಿ ಮುಸ್ಲಿಮರಿಗೆ 4% ಗುತ್ತಿಗೆ ಮೀಸಲಾತಿ ಏಕೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಸಿ ಸಿ ಪಾಟೀಲ ಮಾತನಾಡಿ ಕಳೆದ ವರ್ಷ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ನಾವು ಇನ್ನೂ ಮರೆತಿಲ್ಲ ಅದಕ್ಕಾಗಿ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ಮಾಡಲು ಹೊರಟಿದ್ದೇವೆ, ನಾವು ಜಾತಿಗಾಗಿ ಹೋರಾಟ ಮಾಡುತ್ತ ಇಲ್ಲಾ ಮಕ್ಕಳ ಶಿಕ್ಷಣ ಮತ್ತು ನೌಕರಿ ಮೀಸಲಾತಿಗಾಗಿ ಹೋರಾಟ ನಡೆಯಲಿದೆ ಎಂದರು.
ಈ ಮೌನ ಪ್ರತಿಭಟನೆಯಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ಅರವಿಂದ ಬೆಲ್ಲದ,ಮಾಜಿ ಶಾಸಕ ಎಚ್ ಎಸ್ ಶಿವಶಂಕರ, ಡಾ. ವ್ಹಿ ಆಯ ಪಾಟೀಲ, ಶಶಿಕಾಂತ ನಾಯ್ಕ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಪಂಚಮಸಾಲಿ ಸಂಘಟನೆ ಮಹಿಳಾ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೋಹಿಣಿ ಪಾಟೀಲ, ಆಡಿವೇಶ ಇಟಗಿ, ಸಿ ಆರ್ ಪಾಟೀಲ, ಮುರುಘೇoದ್ರಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಪಂಚಮಸಾಲಿ ಅಧ್ಯಕ್ಷ ನಿಂಗಪ್ಪ ಫಿರೋಜಿ,ಜೆಡಿಎಸ್ ಮುಖಂಡ ಶಂಕರ ಮಾಡಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಮತ್ತು ರಾಜ್ಯ ಪಂಚಮಸಾಲಿ ಮುಖಂಡರು, ಪಂಚಮಸಾಲಿ ಸಮಾಜದ ಸಹಸ್ರಾರು ಜನ ಪಾಲ್ಗೊಂಡಿದ್ದರು.


