ಸವದತ್ತಿ: ಪಂಚಮಸಾಲಿ ಮಲೆಗೌಡ, ಲಿಂಗಾಯತ ಗೌಡ, ದಿಕ್ಷಾ ಲಿಂಗಾಯತರ ಮಕ್ಕಳ ಶಿಕ್ಷಣ, ಯುವಕರ ಉದ್ಯೋಗದ ಸಲುವಾಗಿ 2ಎ ಮೀಸಲಾತಿ ಸೇರುವ ಹಾಗೂ ಲಿಂಗಾಯತ ಉಪಸಮಾಜಗಳಿಗೆ ಓ.ಬಿ.ಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಹೋರಾಟ ನಡೆಸಲು ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಸಮಾಜದವರಿಗೆ 2ಎ ಮೀಸಲಾತಿ ಹಾಗೂ ಓ.ಬಿ.ಸಿ ಮೀಸಲಾತಿ ಪಡೆಯುವ ಸಲುವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದರು.
ಕೊನೆಯ ಹಂತವಾಗಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಕಾನೂನಾತ್ಮಕವಾಗಿ ನಮ್ಮ ಹಕ್ಕನ್ನು ಪಡೆಯುವುದಕ್ಕಾಗಿ ರಾಜ್ಯ ಲಿಂಗಾಯತ ಪಂಚಮಶಾಲಿ ವಕೀಲರ ಮಹಾ ಪರಿಷತ್ತನ್ನು ಸ್ಥಾಪಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಸೆಪ್ಟಂಬರ 22 ರಂದು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಹಿರಿಯ ನ್ಯಾಯಾವಾದಿ ಬಿ ವಿ ಮಲಗೌಡರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸವದತ್ತಿ ಯಲ್ಲಮ್ಮ ಪುರಸಭೆಯ ನೂತನ ಅಧ್ಯಕ್ಷೆ ಚಿನ್ನಮ್ಮ ಹುಚ್ಚನ್ನವರ ವಹಿಸಿದ್ದರು. ಅಥಿತಿಗಳಾಗಿ ಪಂಚಮಶಾಲಿ ಮುಖಂಡರಾದ ಬಸವರಾಜ ಕಾರದಗಿ ಮತ್ತು ಬಸವರಾಜ ಪುಟ್ಟಿ ಲಿಂಗಾಯತ ಪಂಚಮಶಾಲಿಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ವಹಿಸಿದ್ದರು. ಹಾಗೂ ಕಾರ್ಯಕ್ರಮಕ್ಕೆ ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತಿನ ಸದ್ಯಸರು ಆಗಮಿಸಿದ್ದರು.
ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ಇವರನ್ನು ಸನ್ಮಾನಿಸಲಾಯಿತು. ಬಿ ಕೆ ಕಡಕೋಳ ವಕೀಲರು ನಿರೂಪಿಸಿದರು,ಎಮ್ ಬಿ ದ್ಯಾಮನಗೌಡರ ವಕೀಲರು ವಂದಿಸಿದರು.