ಭಗವಂತನಿಗೆ ಹತ್ತಿರವಾಗುವ ಬಳಗವಾಗಲಿ : ಪಂ. ಪುಷ್ಕರಾಚಾರ್ಯ

Ravi Talawar
ಭಗವಂತನಿಗೆ ಹತ್ತಿರವಾಗುವ ಬಳಗವಾಗಲಿ : ಪಂ. ಪುಷ್ಕರಾಚಾರ್ಯ
WhatsApp Group Join Now
Telegram Group Join Now
ಸತ್ತೂರ:31: ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪಾರಾಯಣ ಮತ್ತು ಜ್ಞಾನ ಯಜ್ಞ ಕಾರ್ಯಕ್ರಮ ಮಾಡುವ ಸತ್ಸಂಗ ಸ್ಥಾಪಿಸಿದ ಸುತ್ತೂರಿನ ನಾರಾಯಣ ಪಾರಾಯಣ ಬಳಗವು ಭಗವಂತನಿಗೆ ಹತ್ತಿರವಾಗುವ ಬಳಗ ಹಾಗೂ ಹೆಮ್ಮೆರವಾಗಿ ಬೆಳಗಲಿ ಎಂದು ಪಂ. ಪುಷ್ಕರಾಚಾರ್ಯ ಶಿರಹಟ್ಟಿಯವರು ಹಾರೈಸಿದರು.
ಸುತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀ ಕೇಶವರಾವ ಕುಲಕರ್ಣಿಯವರ ನಿವಾಸದಲ್ಲಿ ಜರುಗಿದ ಬಳಗದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಯುಗಾದಿ ಹಬ್ಬದ ನಿಮಿತ್ತ ನಡೆದ ಪಂಚಾಂಗ ಶ್ರವಣದಲ್ಲಿ ಮಾತನಾಡುತ್ತ, ಪಂಚಾಂಗದ ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ ,ಕರ್ಣಗಳನ್ನು ಶ್ರವಣ ಹಾಗೂ ಪಠಣದಿಂದ ಬಲ ಆರೋಗ್ಯ ಐಶ್ವರ್ಯಾದಿಗಳು ಲಭಿಸುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಶ್ರೇಷ್ಠವಾದುದು, ಭಗವಂತನ ನಾಮಗಳಿಗೆ ಇರುವ ಶಕ್ತಿ ತುಂಬಾ ಅಪಾರವಾದದ್ದು ಬಹಳ ಸ್ಮರಣೆಯಿಂದ ಒಂದೊಂದು ಗುಣಗಳನ್ನು ತಿಳಿಸುತ್ತದೆ.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರಗಿತು ,ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ವಿವಿ ಕಾಂಗೋ, ಹನುಮಂತ ಪುರಾಣಿಕ ವಾದಿರಾಜ ಆಚಾರ್, ಪಟ್ಟಣಕೊಡಿ, ಡಿಕೆ ಜೋಶಿ, ಮುಂಡಗೋಡ, ಎಸ್ ಎಂ ಜೋಶಿ, ವಿಠಲ ಅಂಬಿಕರ, ವಿಲಾಸ್ ಸಬನೀಸ್, ಪಾಂಡುರಂಗ ಕುಲಕರ್ಣಿ, ಆನಂದ ದೇಶಪಾಂಡೆ, ಎಲ್ ವಿ ಜೋಶಿ, ಸಂಜೀವ ಗೊಳಸಂಗಿ , ಬದರಿನಾಥ ಬೆಟಿಗೇರಿ, ಬಹದ್ದೂರ್ ದೇಸಾಯಿ ಧೀರೇಂದ್ರ ತಂಗೋಡ ಶಿರಗುಪ್ಪಿ , ಪ್ರಕಾಶ ದೇಸಾಯಿ, ರಮೇಶ ಅಣ್ಣಿಗೇರಿ, ರಂಗನಾಥ ಕಟ್ಟಿ, ಸಿ ಕೆ ಕುಲಕರ್ಣಿ, ವೆಂಕಟೇಶ ಶಿರೋಳ, ರಮೇಶ ಕುಲಕರ್ಣಿ ಮುಂತಾದ ಕುಟುಂಬದವರು ಉಪಸ್ಥಿತತಿದ್ದರು.
WhatsApp Group Join Now
Telegram Group Join Now
Share This Article