ಟ್ರಂಪ್​ ಮೇಲೆ ನಡೆದ ಮಾರಣಾಂತಿಕ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನದ ಆಸಿಫ್ ಬಂಧನ

Ravi Talawar
ಟ್ರಂಪ್​ ಮೇಲೆ ನಡೆದ ಮಾರಣಾಂತಿಕ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನದ ಆಸಿಫ್ ಬಂಧನ
WhatsApp Group Join Now
Telegram Group Join Now

ಅಮೆರಿಕ: ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ನಡೆದ ಮಾರಣಾಂತಿಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆಸಿಫ್ ಎಂಬ  ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇರಾನ್​ನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಟ್ರಂಪ್​ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಮಾಜಿ ಯುಎಸ್​ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿತ್ತು. ನ್ಯೂಯಾರ್ಕ್​ ಫೆಡರಲ್ ನ್ಯಾಯಾಲಯದಲ್ಲಿ ಆಸಿಫ್ ಮರ್ಚೆಂಟ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿತ್ತು. ಕಳೆದ ತಿಂಗಳು ಪೆನ್ಸಿಲ್​ವೇನಿಯಾದಲ್ಲಿ ಟ್ರಂಪ್​ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಈ ರ್ಯಾಲಿಯಲ್ಲಿ ಟ್ರಂಪ್ ಮೇಲೆ ದಾಳಿ ನಡೆದು ಅವರು ಗಾಯಗೊಂಡಿದ್ದರು. ಗುಂಡಿನ ದಾಳಿಗೂ ಇರಾನ್ ಬೆದರಿಕೆಗೂ ಸಂಬಂಧವಿಲ್ಲ.

ಆಸಿಫ್ ರಜಾ ಮರ್ಚೆಂಟ್ ಎಂದೂ ಕರೆಯಲ್ಪಡುವ ಆಪಾದಿತ ಸಂಚುಕೋರ, ತನಗೆ ಇಬ್ಬರು ಹೆಂಡತಿಯರಿದ್ದು ತಲಾ ಒಬ್ಬರು ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ಮತ್ತು ಎರಡೂ ದೇಶಗಳಲ್ಲಿ ಮಕ್ಕಳಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

WhatsApp Group Join Now
Telegram Group Join Now
Share This Article