ತಾಲಿಬಾನ್‌ ಸಚಿವ ಭಾರತದಲ್ಲಿರುವಾಗಲೇ ಅಫ್ಘಾನಿಸ್ತಾನದ ಮೇಲೆ ಪಾಕ್​ ವೈಮಾನಿಕ ದಾಳಿ

Ravi Talawar
ತಾಲಿಬಾನ್‌ ಸಚಿವ ಭಾರತದಲ್ಲಿರುವಾಗಲೇ ಅಫ್ಘಾನಿಸ್ತಾನದ ಮೇಲೆ ಪಾಕ್​ ವೈಮಾನಿಕ ದಾಳಿ
WhatsApp Group Join Now
Telegram Group Join Now

ಕಾಬೂಲ್, ಅಕ್ಟೋಬರ್ 10: ತಾಲಿಬಾನ್ ಸಚಿವ ಆಮಿರ್ ಖಾನ್ ಮುತ್ತಖಿ ಇತ್ತ ಭಾರತಕ್ಕೆ ಆಗಮಿಸುತ್ತಿದ್ದಂತೆ ಅತ್ತ ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಕಾಬೂಲ್​ನ ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿದೆ. ನಾಲ್ಕು ವರ್ಷಗಳ ಹಿಂದೆ ಅಶ್ರಫ್ ಘನಿ ಸರ್ಕಾರದ ಪತನದ ನಂತರ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಿಂದ ಇದೇ ಮೊದಲ ಉನ್ನತ ಮಟ್ಟದ ಪ್ರವಾಸವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಜೆಟ್‌ಗಳ ಶಬ್ದಗಳು ಮತ್ತು ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ. ಕಾಬೂಲ್‌ನ ಅಬ್ದುಲ್ ಹಕ್ ಚೌಕದ ಬಳಿ ಸ್ಫೋಟಗಳು ಸಂಭವಿಸಿವೆ. ಮಾಧ್ಯಮ ವರದಿಯ ಪ್ರಕಾರ, ಈ ದಾಳಿಯು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥ ಮುಫ್ತಿ ನೂರ್ ವಾಲಿ ಮೆಹ್ಸೂದ್ ಅವರ ಅಡಗುತಾಣವನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ. ನೂರ್ ವಾಲಿ ಜೊತೆಗೆ, ಕಮಾಂಡರ್‌ಗಳಾದ ಖಾರಿ ಸೈಫುಲ್ಲಾ ಮೆಹ್ಸೂದ್ ಮತ್ತು ಖಾಲಿದ್ ಮೆಹ್ಸೂದ್ ಕೂಡ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Share This Article